ದಕ್ಷಿಣ ಭಾರತದಲ್ಲಿ ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ದೀಪಾವಳಿಯನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ಬಾರಿ ನವೆಂಬರ್ 8ರಂದು ನರಕ ಚತುರ್ದಶಿ, 9ರಂದು ದೀಪಾವಳಿ ಹಾಗೂ 10ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ.ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡುವ ಸಂಪ್ರದಾಯವಿದೆ. ಅಂದು ಸ್ನಾನ ಮಾಡಿ, ಮೃತ್ಯು ದೇವತೆಯಾದ ಯಮರಾಜನಿಗೆ ತರ್ಪಣ ನೀಡಿ, ಒಂದು ದೀಪವನ್ನು ಹಚ್ಚುವುದು ವಾಡಿಕೆ.ಮರುದಿನ ಅಮಾವಾಸ್ಯೆ. ವರ್ಷದ ಅತ್ಯಂತ ಕತ್ತಲೆಯ ದಿನ ಎಂದು