ರಶ್ಮಿ ಪೈ ದೀಪಾವಳಿಯಲ್ಲಿ ಅಮಾವಾಸ್ಯೆ ಕಳೆದು ಬರುವ ದಿನವೇ ಬಲಿಪಾಡ್ಯಮಿ. ಇದನ್ನು ಮುಖ್ಯವಾಗಿ ಕೃಷಿಕರು ಭಕ್ತಿ ಸಂಭ್ರಮದಿಂದ ಆಚರಿಸುತ್ತಾರೆ.ತಮ್ಮ ಸಂಪತ್ತು ಸಮೃದ್ಧಿಗಾಗಿ, ಭೂಲೋಕಾಧಿಪತಿಯಾದ ಬಲೀಂದ್ರ ಅಥವಾ ಬಲಿ ಚಕ್ರವರ್ತಿಯ ಕೃಪೆಗೆ ಪಾತ್ರರಾಗಲು ಆಚರಿಸುವ ಹಬ್ಬವಿದು. ಪುರಾಣವು ಹೇಳುವಂತೆ ಬಲಿ ಚಕ್ರವರ್ತಿಯನ್ನು ಭಗವಾನ್ ಮಹಾವಿಷ್ಣುವು ಸತ್ವ ಪರೀಕ್ಷೆಗೊಳಪಡಿಸಿದಾಗ, ಅಂದರೆ ತಾನಾಳುತ್ತಿರುವ ಭೂ ಪ್ರದೇಶದಿಂದ ಕೇವಲ ಮೂರು ಅಡಿ ಭೂಮಿಯನ್ನು ದಾನವಾಗಿ ನೀಡಬೇಕೆಂದು ವಾಮನ ರೂಪದಲ್ಲಿ ಬಂದ ಮಹಾವಿಷ್ಣುವು ಕೇಳಿದಾಗ, ಸತ್ಯಸಂಧನೂ, ಧಾರ್ಮಿಕನೂ