ನಾವು ಖುಷಿ ಪಡುವಂತಹ ಮತ್ತೊಂದು ಶುಭ ದಿನ ದೀಪಾವಳಿ. ನಮ್ಮ ನಾಡಿನಲ್ಲಿ ಹತ್ತು ಹಲವಾರು ಪ್ರಸಿದ್ಧ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಪ್ರಮುಖ ಹಬ್ಬಗಳಲ್ಲೊಂದು ದೀಪಾವಳಿ ಹಬ್ಬ. ದೀಪಾವಳಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಇದು ಬೆಳಕಿನ ಹಬ್ಬ. ಈ ಬೆಳಕಿನ ಹಬ್ಬವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ. ಬೆಳಕಿನ ಹಬ್ಬವನ್ನು ಭಾರತದಲ್ಲಿ ಮೂರು ದಿವಸಗಳ ಕಾಲ ಆಚರಿಸುತ್ತಾರೆ. ದೀಪಾವಳಿ ಬಂತು ಎಂದರೆ ಸಾಕು