ಉಡುಪಿ: ಎಣ್ಣೆ ಸ್ನಾನ, ತುಳಸಿ ಪೂಜೆ, ಪ್ರತೀ ಗದ್ದೆಗೆ ಹೂ ದೀಪ ಹಚ್ಚೋದು, ಹಬ್ಬದಡುಗೆಯ ಖುಷಿ.....ಈ ಸಂಭ್ರಮಗಳ ತೂಕ ಒಂದಾದರೆ ನನ್ನಂತವರಿಗೆ ಈ ಗೋಪೂಜೆ ಯ ಸಂಭ್ರಮವೇ ಇನ್ನೊಂದು ತೂಕ! ಬೆಳ್ಳಂಬೆಳಗ್ಗೆ ದನಗಳಿಗೆಲ್ಲ ಸಾಲು ಸಾಲು ಸ್ನಾನ..ರಾತ್ರಿಯ ತುಳಸಿಪೂಜೆಯ ಬಿಳಿ ಹಳದಿ ಸೇವಂತಿಗೆ, ಮಲ್ಲಿಗೆ, ಸಿಂಗಾರದ ಹೂ(ಅಡಿಕೆ ಹೂ) ದಾಸವಾಳ, ತಾವರೆಯ ಹೂವುಗಳನ್ನೆಲ್ಲ ಬಾಳೆನಾರಿನಲ್ಲಿ ಮಾಲೆ ಮಾಡಿ ಗೌರಿ, ಕೆಂಪಿ, ಲಕ್ಷ್ಮಿ, , ಗುರು, ಇನ್ನೂ ಹೆಸರಿಡದ ತಿಂಗಳ ಅಂಬಾಬೂಚಿ