ದೀಪಾವಳಿ ಸಡಗರ ಸಂಭ್ರಮದ ಹಬ್ಬ. ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಆನ್-ಲೈನ್ ಪೋರ್ಟಲ್ಗಳು ಗ್ರಾಹಕರನ್ನು ಸೆಳೆಯಲು ಬಹುಮಾನ, ಕ್ಯಾಶ್ಬ್ಯಾಕ್ ಆಫರ್ ಸೇರಿದಂತೆ ವಿವಿಧ ರೀತಿಯ ಅಮಿಷಗಳನ್ನು ಆಕರ್ಷಕವಾದ ಜಾಹೀರಾತುಗಳ ಮೂಲಕ ಬಿತ್ತರಿಸುತ್ತವೆ. ಕಳೆದ ವರ್ಷ ಗ್ರಾಹಕರು ಎಲ್ಸಿಡಿ, ಟಿ.ವಿ, ಮೈಕ್ರೋವೇವ್, ಎಂಪಿ3 ಪ್ಲೇಯರ್ಸ್ ಮತ್ತು ಡಿಜಿಟಲ್ ಕ್ಯಾಮರಾಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದು, ಪ್ರಸಕ್ತ ವರ್ಷ ಖರೀದಿಯಲ್ಲಿ ಇದರ ಸಂಖ್ಯೆ ದ್ವಿಗುಣವಾಗಲಿದೆ ಎಂದು ವಹಿವಾಟು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.