ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ನವದೆಹಲಿ, ಬುಧವಾರ, 9 ಏಪ್ರಿಲ್ 2014 (17:56 IST)

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಘೋಷಣೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಬಿಜೆಪಿ ಮುಖ್ಯಸ್ಥ ರಾಜನಾಥ್ ಸಿಂಗ್ ಅದು "ಅಪೇಕ್ಷಿಸಿಸದ್ದು", ಹಳೆಯ ಮಿತ್ರ ಶಿವಸೇನೆಯ ಜತೆ ಕೇಸರಿ ಪಕ್ಷದ ಸಂಬಂಧಗಳು "ಮುರಿಯಲಾಗದ್ದು" ಎಂದು ಹೇಳಿದ್ದಾರೆ.

PTI

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ಶಿವಸೇನೆ ಜತೆಗಿನ ನಮ್ಮ ಗೆಳೆತನ ಬಹಳ ಹಳೆಯದು ಮತ್ತು ಭವಿಷ್ಯದಲ್ಲಿ ಅದು ಮುಂದುವರೆಯುತ್ತದೆ . ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪಕ್ಷಗಳು ಮೋದಿಯ ಹೆಸರನ್ನು ತೆಗೆದುಕೊಳ್ಳುತ್ತಿವೆ. ಓ ಸಹೋದರ ನೀವು ನಮಗೆ ಅಪೇಕ್ಷಿಸದ ಬೆಂಬಲವನ್ನು ಏಕೆ ನೀಡುತ್ತೀರಿ? ನೀವು ಎನ್‌ಡಿಎ ಜತೆ ಮೈತ್ರಿಯ ಭಾಗವಾಗಿ ಅಥವಾ ಬಿಜೆಪಿಯಲ್ಲಿ ವಿಲೀನವಾಗಿ " ಎಂದು ಹೇಳಿದ್ದಾರೆ

"ಎಂಎನ್ಎಸ್‌ನ್ನು ಹೆಸರಿಸದೆ, ಮಾತನಾಡಿದ ಸಿಂಗ್ ಯಾರೂ ಕೂಡ ಜನರನ್ನು ದಾರಿತಪ್ಪಿಸುವ ರಾಜಕೀಯವನ್ನು ಮಾಡಬಾರದು" ಎಂದು ತಿಳಿಸಿದರು.

ಬಹುಮತವನ್ನು ಪಡೆದ ನಂತರವೂ ಕೂಡ ಎನ್‌ಡಿಎ ಎಂಎನ್ಎಸ್ ಬೆಂಬಲವನ್ನು ಸ್ವೀಕರಿಸುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಸಿಂಗ್ "ಈ ಪ್ರಶ್ನೆ ಕಾಲ್ಪನಿಕವಾದುದು ಸಂಖ್ಯೆ ಎನ್‌ಡಿಎ ಖಚಿತವಾಗಿ ಬಹುಮತವನ್ನು ಪಡೆಯಲಿದೆ" ಎಂದು ಸುದ್ದಿಗಾರರಿಗೆ ಉತ್ತರಿಸಿದರು.

ಬಿಜೆಪಿ ಅಧ್ಯಕ್ಷನಾಗಿ ನನಗೆ ಪ್ರಧಾನಿ ಅಭ್ಯರ್ಥಿ ಮೋದಿಗೆ ನೀಡುತ್ತೇವೆ ಎಂಎನ್ಎಸ್ ಮಾಡಿರುವ ಯಾವುದೇ ಘೋಷಣೆಯ ಬಗ್ಗೆ "ಅರಿವಿಲ್ಲ" ಎಂದು ಸಿಂಗ್ ಸ್ಪಷ್ಟಪಡಿಸಿದರು.

"ನನ್ನ ಭಾಷಣದಲ್ಲಿ ನಾನು ಯಾವುದೇ ಪಕ್ಷವನ್ನು ಉಲ್ಲೇಖಿಸಿಲ್ಲ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :