ಅನ್ಯಾಯ ಮಾಡಿದವರನ್ನು ಸಾಯಿಸಿ ಬಿಡಿ : ಗುಡುಗಿದ ರಾಜ್ ಠಾಕ್ರೆ

ಯವನಮಾಲ್ , ಮಂಗಳವಾರ, 8 ಏಪ್ರಿಲ್ 2014 (10:04 IST)

PTI
ರಾಜ್ಯದಲ್ಲಿನ ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಜವಾಬ್ದಾರರು ಎಂದು ಆರೋಪಿಸಿರುವ ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ "ರೈತರೇ ಆತ್ಮಹತ್ಯೆ ಮಾಡಬೇಡಿ, ಬದಲಿಗೆ ನಿಮಗೆ ಮಾಡಿದವರನ್ನು ಕೊಂದು ಹಾಕಿ" ಎಂದು ಕರೆ ಕೊಟ್ಟಿದ್ದಾರೆ.

ತಮ್ಮ ಪಕ್ಷದಿಂದ ಸ್ಪರ್ಧಿಸುತ್ತಿರುವ ರಾಜು ಪಾಟೀಲ್ ರಾಜೇ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಠಾಕ್ರೆ ಈ ಮಾತನ್ನಾಡಿದ್ದಾರೆ.

"ಕಳೆದ 67 ವರ್ಷಗಳಿಂದ ಕೇವಲ -ರಸ್ತೆ, ವಿದ್ಯುತ್, ನೀರು ಮತ್ತು ಉದ್ಯೋಗ ಈ ನಾಲ್ಕನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಾಗುತ್ತಿದೆ. ಆದರೆ ನಾಲ್ಕು ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬದಲಾಗದೆ ಹಾಗೆ ಉಳಿದುಕೊಂಡಿವೆ".

"ಹಳ್ಳಿಗಳಲ್ಲಿ ಮದ್ಯ ಸುಲಭವಾಗಿ ಸಿಗುತ್ತದೆ. ಆದರೆ ಕುಡಿಯುವ ನೀರಿಗಾಗಿ ಪರದಾಡ ಬೇಕು. ಇದೇ ನಮ್ಮ ವ್ಯವಸ್ಥೆಯ ದುರಂತ" ಎಂದು ಅವರು ಕಿಡಿಕಾರಿದರು.

ತಮ್ಮ ಭಾಷಣದಲ್ಲಿ ರೈತರೊಬ್ಬರ ಆತ್ಮಹತ್ಯಾ ಪತ್ರವನ್ನು ಓದಿದ ಅವರು, ಮತದಾರರಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಗೆ ಓಟು ನೀಡದಂತೆ ಮನವಿ ಮಾಡಿದರು.ಇದರಲ್ಲಿ ಇನ್ನಷ್ಟು ಓದಿ :