ಅಮೇಥಿಯಲ್ಲಿನ ತಮ್ಮ ನಿವಾಸದ ಪುರಾವೆ ಪಡೆಯಲು ವಿಫಲರಾದ ರಾಹುಲ್ ಗಾಂಧಿ

ಅಮೇಥಿ, ಗುರುವಾರ, 3 ಏಪ್ರಿಲ್ 2014 (18:15 IST)

ತಮ್ಮ ನಿವಾಸದ ಪುರಾವೆ ನೀಡುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ಅಮೇಥಿ ಜಿಲ್ಲಾಡಳಿತ ತಿರಸ್ಕರಿಸಿದೆ. ಅವರು ಜಿಲ್ಲೆಯ ಒಕೆಸನಲ್ ( ಸಾಂಧರ್ಭಿಕ) ನಿವಾಸಿ ಕೂಡ ಅಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

PTI

ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಅಲ್ಲಿಂದ ಪುನರಾಯ್ಕೆಯನ್ನು ಬಯಸಿದ್ದಾರೆ.

"ಸಂಸದ ವೈಯಕ್ತಿಕವಾಗಿ ಬಂದು ಅರ್ಜಿ ಸಲ್ಲಿಸುವುದರ ಬದಲಿಗೆ ವಕೀಲರನ್ನು ಕಳುಹಿಸಿದ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲಾಯಿತು" ಎಂದು ಅಮೇಥಿ ವಿಭಾಗೀಯ ಮ್ಯಾಜಿಸ್ಟ್ರೇಟ್ ಖಾಸಗಿ ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.

"ಅಲ್ಲದೆ, ಅರ್ಜಿಯ ಜತೆಗೆ ಮತದಾರನ ಕಾರ್ಡ್ ಕೂಡ ಇರಲಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.

ಅಮೇಥಿಯಲ್ಲಿ ಒಂದು ಬ್ಯಾಂಕ್ ಖಾತೆ ತೆರೆಯಲು ಬಯಸಿದ್ದ ಗಾಂಧಿಗೆ ನಿವಾಸದ ಪುರಾವೆ ಅಗತ್ಯವಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :