ಅಮೇಥಿಯಲ್ಲಿ ರಾಹುಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ನಟಿ ಸ್ಮೃತಿ ಇರಾನಿ

ಅಮೇಥಿ, ಮಂಗಳವಾರ, 1 ಏಪ್ರಿಲ್ 2014 (15:47 IST)

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಸ್ಮೃತಿ ಇರಾನಿಯವರನ್ನು ಕಣಕ್ಕಿಳಿಸುವುದಾಗಿ ಘೋಷಿಸುವುದರ ಮೂಲಕ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಬಿಜೆಪಿ ಕೊನೆ ಹಾಡಿದೆ.

PTI

ಸುಪ್ರೀಂಕೋರ್ಟ್ ವಕೀಲರಾದ ಅಜಯ್ ಅಗ್ರವಾಲ್‌ರನ್ನು ಸೋನಿಯಾಗೆ ಎದುರಾಳಿಯಾಗಿ ರಾಯ್‌ಬರೇಲಿಯಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷ ರಾಯ್‌ಬರೇಲಿಯಿಂದ ಉಮಾ ಭಾರತಿಯವರನ್ನು ಆಖಾಡಕ್ಕಿಳಿಸುತ್ತಿದೆ ಎಂಬ ವದಂತಿಗಳಿದ್ದವು. ಆದರೆ ಅವರು ಝಾನ್ಸಿ ಕ್ಷೇತ್ರವನ್ನು ಬಿಡಲು ಆಸಕ್ತಿ ತೋರಲಿಲ್ಲ ಮತ್ತು ಎರಡು ಸ್ಥಾನಗಳಲ್ಲಿ ಆಕೆಯನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಒಮ್ಮತದ ನಿರ್ಧಾರ ಬರಲಿಲ್ಲ.

ಉನ್ನತ ನಾಯಕರಾದ ನರೇಂದ್ರ ಮೋದಿ, ಎಲ್.ಕೆ. ಆಡ್ವಾಣಿ, ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಉಪಸ್ಥಿತರಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಇರಾನಿ ಮತ್ತು ಅಗರ್ವಾಲ್‌ರವರ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಜೆಪಿ ಹೈಕಮಾಂಡ್ ಮೂಲಗಳು ತಿಳಿಸಿವೆಇದರಲ್ಲಿ ಇನ್ನಷ್ಟು ಓದಿ :