Widgets Magazine

ಅರವಿಂದ್ ಕೇಜ್ರಿವಾಲ್ ಬೀದಿಯಲ್ಲಿ ಸಿಕ್ಕವರಿಗೆಲ್ಲ ಕಚ್ಚುತ್ತಾರೆ: ಮೊಯ್ಲಿ ವಾಗ್ದಾಳಿ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಬೆಂಗಳೂರು: ಅರವಿಂದ್ ಕೇಜ್ರಿವಾಲ್ ಬೀದಿಯಲ್ಲಿ ಸಿಕ್ಕವರಿಗೆಲ್ಲ ಕಚ್ಚುತ್ತಾರೆ. ಕೇಜ್ರಿವಾಲ್‌ಗೆ ಯಾವುದೇ ವಿವೇಚನೆಯಿಲ್ಲ. ವಿನಾಕಾರಣ ಆರೋಪ ಮಾಡ್ತಿದ್ದಾರೆ. ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ದೇವನಹಳ್ಳಿಯಲ್ಲಿ ಕಿಡಿಕಾರಿದ್ದಾರೆ. ಎಸ್.ಆರ್. ಹಿರೇಮಠ್ ಮಾಡಿರುವ ಆರೋಪ ನಿರಾಧಾರ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಯಾವುದೇ ದಾಖಲೆಗಳಿದ್ದರೆ ಸಲ್ಲಿಸಲಿ. ಅರವಿಂದ್ ಕೇಜ್ರಿವಾಲ್ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :