ಅರುಣ ಜೆಟ್ಲಿ ಆಗಲಿದ್ದಾರೆ ಉಪಪ್ರಧಾನಿ: ಭವಿಷ್ಯ ನುಡಿದ ಬಾದಲ್

ಅಮೃತಸರ, ಶನಿವಾರ, 22 ಮಾರ್ಚ್ 2014 (12:49 IST)

PTI
ಶುಕ್ರವಾರ ನಡೆದ ಒಂದು ಪ್ರಚಾರ ಸಭೆಯಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಭಾರತೀಯ ಜನತಾ ಪಕ್ಷದ ನಾಯಕ ಮುಂದಿನ ಉಪಪ್ರಧಾನಿಯಾಗಲಿದ್ದಾರೆ ಎಂದು ನುಡಿದಿದ್ದಾರೆ. ಜೆಟ್ಲಿ ಅಮೃತಸರದಿಂದ ಅಮರಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಪಂಜಾಬಿನ ಅಟಾರಿಯಲ್ಲಿ ಶುಕ್ರವಾರ ಅರುಣ ಜೆಟ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್, ಜೆಟ್ಲಿ ಭಾರತದ ಮುಂದಿನ ಉಪ ಪ್ರಧಾನಿ ಎಂದು ಹೇಳಿದರಲ್ಲದೇ "ನೀವು ಇವರನ್ನು ಗೆಲ್ಲಿಸಿದರೆ ಅವರು ಉಪ ಪ್ರಧಾನಿ ಅಥವಾ ವಿತ್ತಮಂತ್ರಿಯಾಗಲಿದ್ದಾರೆ" ಎಂದು ತಿಳಿಸಿದರು.

ಬಾದಲ್‌ರ ಈ ಹೇಳಿಕೆಯಿಂದ ಮತ್ತೊಮ್ಮೆ ಬಿಜೆಪಿಯಲ್ಲಿ ಆಕ್ರೋಶ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ನಿಖರವಾಗಿ ಜೇಟ್ಲಿಗೆ ದೊಡ್ಡ ಜವಾಬ್ದಾರಿ ಸಿಗಬಹುದು.

ಬಾದಲ್ ಹೇಳಿಕೆಗೆ ಮೊದಲ ಪ್ರತಿಕ್ರಿಯೆ ಶಿವಸೇನೆಯಿಂದ ಬಂದಿದ್ದು ಅರುಣ್ ಜೇಟ್ಲಿ ಹೆಸರಲ್ಲಿ ನಮಗೆ ಆಕ್ಷೇಪಣೆ ಇಲ್ಲ. ಆದರೆ ಸುಷ್ಮಾ ಸ್ವರಾಜ್ ಹೆಸರನ್ನು ಯಾಕೆ ತೆಗಿದುಕೊಳ್ಳುತ್ತಿಲ್ಲ ಎಂದು ಅದು ಪ್ರಶ್ನಿಸಿದೆ. ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಮೊದಲಿನಿಂದಲೂ ಶಿವಸೇನೆ ಸುಷ್ಮಾ ಪರ ವಹಿಸುತ್ತ ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...