ಆಪ್‌ಗೆ ಸಿಕ್ಕಿತು ಒಂದು ಕೋಟಿ ಚಂದಾ

ನವದೆಹಲಿ, ಶುಕ್ರವಾರ, 18 ಏಪ್ರಿಲ್ 2014 (08:36 IST)

ಅರವಿಂದ ಕೇಜ್ರಿವಾಲ್ ಮನವಿಯ ನಂತರ ಆಪ್ ಪಕ್ಷಕ್ಕೆ ಕಳೆದ ಎರಡು ದಿನಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಚಂದಾ ಸಿಕ್ಕಿದೆ.

PTI

ಕಳೆದ ಎರಡು ದಿನಗಳಲ್ಲಿ ದೇಣಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಬುಧವಾರ 80 ಲಕ್ಷ ರೂಪಾಯಿ ಸಂಗ್ರಹವಾಗಿತ್ತು ಮತ್ತು ಗುರುವಾರ 35 ಲಕ್ಷ ಹಣ ಸಂಗ್ರಹವಾಗಿದೆ ಎಂದು ಆಪ್‪ನ ನಾಯಕರೊಬ್ಬರು ತಿಳಿಸಿದ್ದಾರೆ.

ಈ ದೇಣಿಗೆಯಲ್ಲಿ ಭಾರತದಷ್ಟೇ ಅಲ್ಲ, ವಿದೇಶದ ಪಾಲು ಕೂಡ ಇದೆ. ಅಮೇರಿಕಾ, ಬೆಲ್ಜಿಯ್ಂ, ಓಮಾನ್, ಕೆನಡಾ, ಜಪಾನ್, ಜರ್ಮನಿ, ಆಸ್ಟ್ರೇಲಿಯಾದಲ್ಲಿ ಪಕ್ಷದ ಬೆಂಬಲಿಗರು ದೇಣಿಗೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟಿದ್ದಾರೆ. ಅಲ್ಲೇ ಕನಿಷ್ಠ 10 ರೂಪಾಯಿ ಚಂದಾ ಕೂಡ ಸಿಕ್ಕಿದೆ.

ಎರಡು ದಿನಗಳ ಮೊದಲು ಆಪ್ ನಾಯಕ ಕೇಜ್ರಿವಾಲ್ ಜನರಲ್ಲಿ ಸಹಾಯ ಧನ ನೀಡಿ ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದರು. ವಾರಣಾಸಿಯಿಂದ ಮೋದಿ ಎದುರಾಗಿ ಕಣಕ್ಕಿಳಿದಿರುವ ಕೇಜ್ರಿವಾಲ್ ತಂಡ ಕೆಲವು ದಿನಗಳ ಹಿಂದೆ ಲಾಪಟಾಪ್‌ಗಾಗಿ ಮನವಿ ಸಲ್ಲಿಸಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...