ಇಂದು ಬಿಜೆಪಿ ಐದನೇ ಪಟ್ಟಿಯಲ್ಲಿ ಮೋದಿಯ ಎರಡನೇ ಕ್ಷೇತ್ರ ಪ್ರಕಟ

ಬುಧವಾರ, 19 ಮಾರ್ಚ್ 2014 (19:23 IST)

PR
PR
ಇಂದು ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟವಾಗಲಿದೆ. ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಹಿರಿಯ ನಾಯಕರು, ಕ್ರೀಡಾಪಟುಗಳಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ನರೇಂದ್ರ ಮೋದಿ ಅವರು ವಾರಾಣಸಿ ಹೊರತುಪಡಿಸಿ ಇನ್ನೊಂದು ಕ್ಷೇತ್ರದಲ್ಲಿ ಕೂಡ ಸ್ಪರ್ಧಿಸಬೇಕು ಎಂಬ ಒತ್ತಾಯದ ಮೇಲೆ ಮೋದಿಯವರಿಗೆ ಗುಜರಾತಿನಲ್ಲಿ ಎರಡನೇ ಕ್ಷೇತ್ರ ಕೂಡ ಅಂತಿಮವಾಗಲಿದೆ. ಎಲ್.ಕೆ.ಅಡ್ವಾಣಿ ಗುಜರಾತಿನ ಗಾಂಧಿನಗರದಲ್ಲಿ ಸ್ಪರ್ಧಿಸುತ್ತಾರೆಯೇ ಅಥವಾ ಭೂಪಾಲ್‌ಗೆ ಸ್ಥಳಾಂತರಗೊಳ್ಳುತ್ತಾರೆಯೇ ಎನ್ನುವುದು ದೃಢಪಡಲಿದೆ.ಮೋದಿ ಅವರು ಗುಜರಾತಿನ ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವ ಸಂಭವವಿದೆ. ಇದಕ್ಕೆ ಮುಂಚೆ ಬರೋಡ ಮತ್ತು ಸೂರತ್ ಕ್ಷೇತ್ರಗಳನ್ನು ಸಂಭವನೀಯ ಸೀಟುಗಳಾಗಿ ಮೋದಿ ಅವರಿಗೆ ಸಲಹೆ ಮಾಡಲಾಗಿತ್ತು.

ಬಿಜೆಪಿಯ ಐದನೇ ಪಟ್ಟಿಯಲ್ಲಿ ಗುಜರಾತ್, ರಾಜಸ್ಥಾನ್ ಮತ್ತು ಉತ್ತರಪ್ರದೇಶದ ಉಳಿದ 22 ಸೀಟುಗಳು ಮತ್ತು ಮಧ್ಯಪ್ರದೇಶದ ಐದು ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಒಳಗೊಂಡಿರುತ್ತದೆ. ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್, ವಸುಂಧರ ರಾಜೆ ಪುತ್ರ ದುಷ್ಯಂತ್ ಸಿಂಗ್, ಮಾಜಿ ಒಲಿಂಪಿಯನ್ ರಾಜ್ಯವರ್ಥನ್ ರಾಥೋರ್, ಹಿರಿಯ ನಾಯಕ ಜಸ್ವಂತ್ ಸಿಂಗ್, ಹೇಮಮಾಲಿನಿ ಹೆಸರನ್ನು ಪಟ್ಟಿಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...