ಇಂದು ಬಿಡುಗಡೆಯಾಗಲಿದೆ ಬಿಜೆಪಿಯ ಘೋಷಣಾಪತ್ರ

ನವದೆಹಲಿ, ಸೋಮವಾರ, 7 ಏಪ್ರಿಲ್ 2014 (09:53 IST)

ಇಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದೆ. ಆದರೆ ಘೋಷಣಾ ಪತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿಲ್ಲ. ಕೊನೆಯಲ್ಲಿ ಏಪ್ರಿಲ್ 12ರ ಚುನಾವಣೆ ಮುಗಿಯುವವರೆಗೂ ಪ್ರಣಾಳಿಕೆಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

PTI

ಜನಪ್ರತಿನಿಧಿ ಕಾನೂನು 126-1 ಬಿ ಪ್ರಕಾರ ಚುನಾವಣೆಯ ದಿನ ಮತದಾನ ಮುಗಿಯುವ 48 ಗಂಟೆಗಳವರೆಗೆ ಮತದಾನ ಪ್ರಣಾಳಿಕೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ಹಾಗಿಲ್ಲ.

ಏಪ್ರಿಲ್ 7, ಏಪ್ರಿಲ್ 9, ಏಪ್ರಿಲ್ 10 ಮತ್ತು ಏಪ್ರಿಲ್ 12 ರಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಪ್ರಣಾಳಿಕೆಯನ್ನು, ಏಪ್ರಿಲ್ 12 ರ ಸಂಜೆಯ ಮೊದಲು ಪ್ರಸಾರ ಮಾಡಲಾಗುವುದಿಲ್ಲ.

ಪ್ರಣಾಳಿಕೆಯನ್ನು ಇನ್ನುವರೆಗೂ ಬಿಡುಗಡೆ ಮಾಡದಿರುವುದರ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಬಿಜೆಪಿ ಪಕ್ಷದಲ್ಲಿ ನೀತಿ ಇಲ್ಲ. ಕೇವಲ ಅಧಿಕಾರ ಪಡೆಯುವುದೊಂದೆ ಅದರ ಗುರಿಯಾಗಿದೆ ಎಂದು ಹೇಳಿತ್ತು.ಇದರಲ್ಲಿ ಇನ್ನಷ್ಟು ಓದಿ :