ಇಂದೋರ್‌ನಲ್ಲಿ ಇಳಿಸಲಾಯಿತು ಪ್ರಶಾಂತ್ ಭೂಷಣ ಟೋಪಿ

ಆಪ್ ಅಭ್ಯರ್ಥಿ ಅನಿಲ್ ತ್ರಿವೇದಿಯವರ ಪರ ಪ್ರಚಾರ ನಡೆಸಲು ನಗರಕ್ಕೆ ಆಗಮಿಸಿದ ಆಪ್ ನಾಯಕ ಪ್ರಶಾಂತ್ ಭೂಷಣರವರ ಜತೆ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ನಡೆದುಕೊಳ್ಳಲಾಯಿತು. ಅಲ್ಲದೇ ಅವರ ತಲೆಯ ಮೇಲಿದ್ದ ಟೋಪಿಯನ್ನು ತೆಗೆದು ಹಾಕಲಾಯಿತು ಎಂದು ವರದಿಯಾಗಿದೆ.

PTI

ಭೂಷಣ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಸಮಯದಲ್ಲಿ ಅವರ ಹಿಂದಕ್ಕೆ ಹೋದ ಒಬ್ಬ ವ್ಯಕ್ತಿ ಅವರ ತಲೆಯಿಂದ ಟೋಪಿಯನ್ನು ತೆಗೆದ ಮತ್ತು ಭೂಷಣ ಪಾಕಿಸ್ತಾನದ ಏಜಂಟ್ ಎಂದು ಆರೋಪಿಸಿದ. ಆತನ ಹೆಸರು ರಘುವಂಶಿ ಎಂದು ಹೇಳಲಾಗುತ್ತಿದೆ. ನಂತರ ಪರಸ್ಪರ ಎದುರಾದ ಬಿಜೆಪಿ ಮತ್ತು ಆಪ್ ಕಾರ್ಯಕರ್ತರು ಗಲಾಟೆ ಪ್ರಾರಂಭಿಸಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಭೂಷಣ "ಇದು ಯೋಜಿತ ಷಡ್ಯಂತ್ರ, ಇದರ ಹಿಂದೆ ಬಿಜೆಪಿಯ ಕೈವಾಡವಿದೆ. ಹೆಚ್ಚುತ್ತಿರುವ ಆಪ್ ಜನಪ್ರಿಯತೆ ಬಿಜೆಪಿಗೆ ಸಹ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...