ಇದು ಭಾರತದ ಹೃದಯ ಮತ್ತು ಆತ್ಮವನ್ನು ಉಳಿಸುವ ಯುದ್ಧ : ಸೋನಿಯಾ

ವಿವಿಧ ಸುದ್ದಿವಾಹಿನಿಗಳ ಮೂಲಕ ದೇಶದ ಜನತೆಗೆ ಸಂದೇಶ ನೀಡಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಜನರನ್ನು ವಿಭಾಗಿಸುವವರಿಂದ ಭಾರತದ ಮತ್ತು ಆತ್ಮವನ್ನು ಯುದ್ಧವಾಗಿದೆ ಎಂದು ಕರೆ ನೀಡಿದ್ದಾರೆ.

PTI

ನರೇಂದ್ರ ಮೋದಿ ಮತ್ತು ಬಿಜೆಪಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು "ನಾವು ಏಕತೆಯನ್ನು ಬಯಸುತ್ತೇವೆ. ಅವರು ಏಕರೂಪತೆಯನ್ನು ಹೇರಲು ಬಯಸುತ್ತಾರೆ. ಅವರು ಕೇವಲ ನಾನು ಎಂಬುದರಲ್ಲಿ ವಿಶ್ವಾಸ ಇಡಿ" ಎಂದು ಹೇಳುತ್ತಾರೆ ಎಂದರು.

"ಪ್ರೀತಿ ಮತ್ತು ಗೌರವ, ಸಮಾನತೆ,ಅಹಿಂಸೆ ಮತ್ತು ಭ್ರಾತೃತ್ವ ನಮ್ಮ ತಾಯಿನಾಡಿನ ಹೃದಯ ಮತ್ತು ಆತ್ಮಗಳಲ್ಲಿವೆ ಮತ್ತು ನಾವು ಈ ಚುನಾವಣೆಯಲ್ಲಿ ಈ ಹೃದಯ ಮತ್ತು ಆತ್ಮವನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇವೆ. ಅವರು ಇದನ್ನು ಬದಲಾಯಿಸಲು ಮತ್ತು ವಿಭಾಗಿಸಲು ಬಯಸುತ್ತಾರೆ. ಪ್ರತ್ಯೇಕಿಸುವವರನ್ನು,ಭಾರತೀಯ ಮೌಲ್ಯಗಳನ್ನು ನಾಶ ಮಾಡುವವರನ್ನು ಮತ್ತು ನಿರಂಕುಶ ಶಕ್ತಿಯನ್ನು ಸೋಲಿಸಿರಿ" ಎಂದು ದೇಶದ ಜನತೆಯಲ್ಲಿ ಅವರು ವಿನಂತಿಸಿಕೊಂಡರು.

"ಸುಳ್ಳು ಮತ್ತು ದ್ವೇಷದ ರಾಜಕಾರಣ ಮಾಡುವ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ನ್ನು ಗೆಲ್ಲಿಸಿ. ಅಧಿಕಾರ ಕೆಲವರಿಗೆ ಸಿಗದೆ, ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗ ಬೇಕೆಂದು ನಾವು ಹೋರಾಡುತ್ತಿದ್ದೇವೆ".

"ಕಾಂಗ್ರೆಸ್ ಸಿದ್ಧಾಂತ ಹೊಸ ಜಗತ್ತಿನ, ಹೊಸ ಗಾಳಿಯನ್ನು ಉಸಿರಾಡುವ ಒಂದು ಆರೋಗ್ಯಕರ, ಮುಕ್ತ ಸಮಾಜದ ಕಲ್ಪನೆಯನ್ನು ಮಾಡುತ್ತದೆ" ಎಂದು ಸೋನಿಯಾ ಹೇಳಿದ್ದಾರೆ.

10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇಲ್ಲಿಯವರೆಗಿನ ಅತಿ ಕಠಿಣ ಹೋರಾಟವನ್ನು, ಅಲ್ಲದೇ ಅಧಿಕಾರ ವಿರೋಧಿ ಅಲೆಯನ್ನು ಕೂಡ ಎದುರಿಸುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...