ಇಲ್ರೀ, ನನಗೆ ಮದುವೆಯಾಗಿದೆ ಎಂದ ಮೋದಿ, ಇಲ್ಲಿಯವರೆಗೆ ಯಾಕೆ ಹೇಳಿಲ್ಲ ಎಂದ ರಾಹುಲ್ ಗಾಂಧಿ

ಶ್ರೀನಗರ್, ಶುಕ್ರವಾರ, 11 ಏಪ್ರಿಲ್ 2014 (17:03 IST)

ಈಗ ನಿವೃತ್ತ ಶಾಲಾ ಶಿಕ್ಷಕಿಯಾಗಿರುವ ಜಶೋಧಾ ಬೆನ್‌ರನ್ನು ಹಲವು ದಶಕಗಳ ಹಿಂದೆ ಮದುವೆಯಾಗಿ, ನಂತರ ಪ್ರತ್ಯೇಕವಾಗಿದ್ದೆ ಎಂದು ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಒಪ್ಪಿಕೊಂಡಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ವಿರುದ್ಧ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

PTI

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, "ಅವರು ಎಷ್ಟು ಚುನಾವಣೆಗಳನ್ನು ಎದುರಿಸಿದ್ದಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಮೊದಲ ಬಾರಿಗೆ ಅವರು ತಾನು ಮದುವೆಯಾಗಿದ್ದೇನೆ" ಎಂದು ಬರೆದಿದ್ದಾರೆ ಎಂದು ಹೇಳಿದರು.

2009ರಲ್ಲಿ ಸರಕಾರಿ ಆದೇಶದ ಮೇರೆಗೆ ಯುವತಿಯೊಬ್ಬಳ ಕುರಿತು ಪೋಲಿಸರು ಪತ್ತೆದಾರಿಕೆಯನ್ನು ಮಾಡಿದ್ದನ್ನು ಕೂಡ ರಾಹುಲ್ ಉಲ್ಲೇಖಿಸಿದರು.

"ಅವರು ದೆಹಲಿಯಲ್ಲಿ ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಅಫಿಡವಿಟ್‌ನಲ್ಲಿ ಪತ್ನಿಯ ಹೆಸರೇ ಕಾಣಲಿಲ್ಲ. ಮುಖ್ಯಮಂತ್ರಿ ಮತ್ತು ಇಡೀ ಪೊಲೀಸ್ ಪಡೆಯ ಗಮನ ಒಂದು ಮಹಿಳೆಯ ಅನ್ವೇಷಣೆಗೆ ಹೋಗುತ್ತದೆ. ಏನು ನಡೆಯುತ್ತಿದೆ ಎಂಬುದನ್ನು ಮುಖ್ಯಮಂತ್ರಿ ತಿಳಿಯ ಬಯಸಿದ್ದಾರೆ ಎಂಬ ಕಾರಣಕ್ಕೆ ಗುಜರಾತ್ ಪೊಲೀಸರು ಒಂದು ಮಹಿಳೆಯ ಹಿಂದೆ ಓಡುತ್ತಾರೆ. ನಂತರ ಮಹಿಳೆಯರನ್ನು ಗೌರವಿಸಿ ಎಂದು ದೆಹಲಿಯಲ್ಲಿ ಪೋಸ್ಟರ್‌ನ್ನು ಹಾಕಲಾಗುತ್ತಿದೆ. ಇದು ಯಾವ ರೀತಿಯ ಗೌರವ ಎಂದು ಗಾಂಧಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿಯ ನಿರ್ಮಲಾ ಸೀತಾರಾಮನ್ "ರಾಹುಲ್ ಗಾಂಧಿ ಅಫಿಡವಿಟ್‌ನ್ನು ಸರಿಯಾಗಿ ಓದಬೇಕು" ಎಂದು ಹೇಳಿದ್ದಾರೆ.

ಮೊನ್ನೆ ವಡೋದರಾದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪತ್ನಿಯ ಹೆಸರನ್ನು ಕೇಳುವ ಕಾಲಮ್‌ಲ್ಲಿ ಜಶೋಧಾ ಬೆನ್ ಎಂದು ಮೊದಲ ಬಾರಿಗೆ ನಮೂದಿಸುವ ಮೂಲಕ ಮೋದಿ ದೇಶವನ್ನು ಆಶ್ಚರ್ಯ ಚಕಿತಗೊಳಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...