Widgets Magazine

ಉತ್ತರಪ್ರದೇಶ ನೀಡಲಿದೆ ಮುಂದಿನ ಪ್ರಧಾನಿಯನ್ನು!

PTI

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವುದರಿಂದ ಇಡೀ ವಿಶ್ವದ ಗಮನ ಆ ಕಡೆಗೆ ನೆಟ್ಟಿದೆ. ಆಪ್ ನಾಯಕ ಕೇಜ್ರಿವಾಲ್ ಸಹ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಾರಂಪಾರಿಕ ಕ್ಷೇತ್ರ ಅಮೇಠಿಯಿಂದ ಅದೃಷ್ಟವನ್ನು ಒರೆಗೆ ಹಚ್ಚುತ್ತಿದ್ದಾರೆ.

ಕೆಲವರು ಬಿಜೆಪಿ ಆಧ್ಯಕ್ಷ ರಾಜನಾಥ್ ಸಿಂಗ್‌ ಕೂಡ ಪ್ರಧಾನಿ ರೇಸ್‌ನ ಓಟದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಸಹ ಉತ್ತರಪ್ರದೇಶದ ಲಖನೌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತಗಳೊಂದಿಗೆ ಗೆಲ್ಲಲು ವಿಫಲವಾಯಿತು ಎಂದರೆ ತೃತೀಯ ರಂಗ ಆ ಅವಕಾಶವನ್ನು ಪಡೆಯಬಹುದು. ಉತ್ತರಪ್ರದೇಶದಿಂದ ಮುಲಾಯಂ ಸಿಂಗ್ ಯಾದವ್ ಕೂಡ ಪ್ರಧಾನಿ ಪಟ್ಟಕ್ಕೆ ಕಣ್ಣಿಟ್ಟಿದ್ದಾರೆ. ರಾಜ್ಯಸಭೆಯ ಸಂಸದರಾಗಿರುವ ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಪಟ್ಟದ ಕನಸು ಅವರಿಗೂ ಇದೆ.ಹೀಗಾಗಿ 4 ಮಂದಿ ಪ್ರಧಾನಿ ಪಟ್ಟಾಕಾಂಕ್ಷಿಗಳ ಭಾರವನ್ನು ಹೊರುತ್ತಿದೆ.

ನವದೆಹಲಿ| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಉತ್ತರಪ್ರದೇಶದಿಂದ ಚುನಾವಣಾ ಕಣಕ್ಕೆ ಇಳಿಯುತ್ತಿರುವುದರಿಂದ, ದೇಶದ ಮುಂದಿನ ಪ್ರಧಾನಿ ಅದೇ ರಾಜ್ಯದಿಂದ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡ ಪ್ರಧಾನಿಯಾಗುವ ಕನಸಿನಲ್ಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :