Widgets Magazine

ಒಂದು ವೇಳೆ ಮೋದಿ ಪ್ರಧಾನಿಯಾದ್ರೆ ದೇಶದ ವಿನಾಶ ಖಚಿತ: ಫಾರುಕ್

PTI
ಲ್ಲಿ ದೇಶವೇ ವಿನಾಶವಾಗಲಿದೆ ಎಂದು ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಮೋದಿ ದೇಶದ ಪ್ರಧಾನಿಯಾದಲ್ಲಿ ಭಾರತೀಯ ಸಂವಿಧಾನವನ್ನು ನಾಶಪಡಿಸುವುದು ಖಚಿತ. ದೇಶದಲ್ಲಿ ಪ್ರತಿಯೊಬ್ಬ ಧರ್ಮಿಯರಿಗೆ ಬದುಕುವ ಹಕ್ಕಿದೆ. ಆದರೆ, ಮೋದಿ ಕೇವಲ ಒಂದು ಧರ್ಮದ ಪರವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷ ಜಂಟಿಯಾಗಿ ಆಯೋಜಿಸಿದ ಚುನಾವಣಾ ಕಾರ್ಯಕ್ರಮದಲ್ಲಿ ಫಾರುಕ್, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಪಕ್ಷದಲ್ಲಿರುವ ಹಿರಿಯರನ್ನು ಗೌರವಿಸದ ವ್ಯಕ್ತಿ ದೇಶದ ಹಿರಿಯರನ್ನು ಹೇಗೆ ಗೌರವಿಸುತ್ತಾನೆ? ಆಡ್ವಾಣಿ, ಸುಷ್ಮಾ ಸ್ವರಾಜ್, ಜಸ್ವಂತ್ ಸಿಂಗ್ ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದರು.

ಕಾಂಗ್ರೆಸ್ ಅಥವಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕರ್ತರ ವರ್ತನೆಯ ಬಗ್ಗೆ ಕೆಲವರ ಮನಸ್ಸಿಗೆ ನೋವಾಗಿರಬಹುದು. ಅಂತಹವರಲ್ಲಿ ಕ್ಷಮೆ ಕೋರುತ್ತೇನೆ. ಆದರೆ, ನಾವು ಮಾಡಿದ ಮಾಡಿರದ ಕಾರ್ಯಗಳ ಬಗ್ಗೆ ವಿವರಣೆ ನೀಡುವ ಸಮಯ ಇದಲ್ಲ ಎಂದು ಹೇಳಿದ್ದಾರೆ.

ಅನಂತನಾಗ್| ರಾಜೇಶ್ ಪಾಟೀಲ್|
ಒಂದು ವೇಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶದ ಪ್ರಧಾನಿಯಾ
ದೇಶದ ಏಳಿಗೆಯ ಬಗ್ಗೆ ಚಿಂತನೆ ಮಾಡುವಂತಹ ಸಮಯ ಬಂದಿದೆ. ಆದ್ದರಿಂದ, ನಮ್ಮ ಮೇಲೆ ಕೋಪವಿಟ್ಟುಕೊಂಡು ಮತದಾನ ಮಾಡಬೇಡಿ ಎಂದು ನಾನು ಹೇಳುತ್ತಿರುವುದಾಗಿ ಕೇಂದ್ರ ಸಚಿವ ಫಾರುಕ್ ಅಬ್ದುಲ್ಲಾ ಮನವಿ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :