ಕಣಕ್ಕಿಳಿಯಲು ನಿರಾಕರಿಸಿದ್ದರು ಉಮಾಭಾರತಿ

ಭೂಪಾಲ್, ಸೋಮವಾರ, 7 ಏಪ್ರಿಲ್ 2014 (09:07 IST)

PTI
ಬಿಜೆಪಿಯ ಉಪಾಧ್ಯಕ್ಷೆ ಮತ್ತು ಉತ್ತರಪ್ರದೇಶದ ಝಾಂಸಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಉಮಾಭಾರತಿ ತನ್ನ ಆರೋಗ್ಯ ಸ್ಥಿರವಾಗಿಲ್ಲದ ಕಾರಣ ನಾನು ಸ್ಪರ್ಧಿಸಲು ನಿರಾಕರಿಸಿದ್ದೆ . ಆದರೆ ಪಕ್ಷದ ಆದೇಶವನ್ನು ಪಾಲಿಸುವುದು ನನ್ನ ಧರ್ಮ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧಿ ಪಕ್ಷ ಕಾಂಗ್ರೆಸ್ ಉಮಾ ಬಿಜೆಪಿಲ್ಲಿನ ಆಂತರಿಕ ಗುಂಪುಗಾರಿಕೆ ಮತ್ತು ಸಂಘರ್ಷಕ್ಕೆ ಬಲಿಪಶುವಾಗಿದ್ದಾರೆ. ಈ ' ರಾಜಕೀಯ ಜ್ವರ ' ದ ಕಾರಣಕ್ಕೆ ಅವರು ಇದ್ದಕ್ಕಿದ್ದಂತೆ ಝಾನ್ಸಿಯಿಂದ ಭೋಪಾಲ್ ಮರಳಿದರು ಎಂದು ಹೇಳಿದೆ.

ಚುನಾವಣಾ ಭಾಷಣಾ ಮಾಡುತ್ತಿದ್ದ ವೇಳೆ ಪೂರ್ವ ಪ್ರಧಾಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಮೋದಿಯ ವಾಕ್ಚಾತುರ್ಯದ ನಡುವೆ ತುಲನೆಯನ್ನು ಮಾಡಿದ್ದು ಸಹ ವಿವಾದಕ್ಕೆ ಕಾರಣಾವಾಗಿತ್ತು. ಅಲ್ಲದೇ ಉಮಾ ಸೋನಿಯಾ ಎದುರಾಗಿ ರಾಯ್‌ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂದು ಸಹ ಚರ್ಚೆ ಪ್ರಾರಂಭವಾಗಿತ್ತು. ಆದರೆ ಅದು ಮುಂದುವರೆಯಲಿಲ್ಲ.ಇದರಲ್ಲಿ ಇನ್ನಷ್ಟು ಓದಿ :