ಕಾಂಗ್ರೆಸ್‌ಗೆ ತನ್ನ ಬೆಂಬಲ ಪ್ರಕಟಿಸಿದ ಶಾಹಿ ಇಮಾಮ್

ನವದೆಹಲಿ, ಶನಿವಾರ, 5 ಏಪ್ರಿಲ್ 2014 (14:50 IST)

ದೆಹಲಿಯ ಜಾಮಾ ಮಸೀದಿಯ ಸೈಯದ್ ಅಹಮದ್ ಬುಖಾರಿ ಪಶ್ಚಿಮ ಬಂಗಾಳದಲ್ಲಿರುವ ಮುಸ್ಲಿಮರು ತೃಣಮೂಲ ಕಾಂಗ್ರೆಸ್‌ಗೆ ಮತ್ತು ಇತರ ರಾಜ್ಯಗಳಲ್ಲಿನ ಮುಸ್ಲಿಮರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕರೆ ಕೊಟ್ಟಿದ್ದಾರೆ.

PTI

"ಹಾಗೆ ಮಾಡುವುದರಿಂದ ದೇಶದಲ್ಲಿ ಜಾತ್ಯತೀತತೆ ಬಲಿಷ್ಠಗೊಳ್ಳುತ್ತದೆ. ಬಿಎಸ್ಪಿ ಮತ್ತು ಎಸ್ಪಿ ಮುಸ್ಲಿಮರಿಗೆ ದ್ರೋಹ ಎಸಗಿದ್ದಾರೆ. ಆದ್ದರಿಂದ ಅವುಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ" ಎಂದು ಬುಖಾರಿ ಹೇಳಿದ್ದಾರೆ.

ಕೋಮು ಶಕ್ತಿಗಳ ವಿರುದ್ಧ ನಾವು ಹೋರಾಡ ಬೇಕಿದೆ. ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳಿಗೆ ಮತಗಳನ್ನು ಹಾಕುವುದು ವ್ಯರ್ಥ. ಅವರು ನಂಬಿಕೆಗೆ ಅರ್ಹರಲ್ಲ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಅವರ ಪ್ರದೇಶದಲ್ಲಿನ ಜನರೇ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳುತಾರೆಯೇ ಅಥವಾ ಇಲ್ಲವೋ ಎಂಬುವುದು ಬಹು ದೊಡ್ಡ ಪ್ರಶ್ನೆಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :