Widgets Magazine

ಕಾಂಗ್ರೆಸ್‌ಗೆ ದೇಶದ ಗಡಿಗಳ ಬಗ್ಗೆ ಚಿಂತೆ ಇಲ್ಲ: ರಾಜನಾಥ್ ಸಿಂಗ್

PTI

"ನಮ್ಮ ಸೈನಿಕರು ದೇಶವನ್ನು ರಕ್ಷಿಸಲು ದಿನ-ರಾತ್ರಿ ಕ್ರಿಯಾಶೀಲರಾಗಿರುತ್ತಾರೆ. ಶತ್ರುಗಳು ಅವರ ತಲೆಯನ್ನು ಕತ್ತರಿಸಿ ಹಾಕುತ್ತಾರೆ. ಆದರೆ ಅವರಿಗೆ ಸಮರ್ಥ ಉತ್ತರ ನೀಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಿವಾನಿ ಮಹೇಂದ್ರಗಡ ಲೋಕಸಭಾ ಸ್ಥಾನದಿಂದ ಕಣಕ್ಕಿಳಿದಿರುವ ಧರಮವೀರ ಸಿಂಗ್ ಪರ ಪ್ರಚಾರ ನಡೆಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾದರೆ ಯಾವ ಶತ್ರುಗಳು ಕೂಡ ಭಾರತದ ಕಡೆ ನೋಡುವ ಧೈರ್ಯ ಕೂಡ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಿವಾನಿ| ವೆಬ್‌ದುನಿಯಾ| Last Modified ಶನಿವಾರ, 5 ಏಪ್ರಿಲ್ 2014 (08:41 IST)
ಕಾಂಗ್ರೆಸ್ ಕೇವಲ ಸರ್ಕಾರವನ್ನು ರಚಿಸಲು ತೃತೀಯ ರಂಗ ಅಥವಾ ನಾಲ್ಕನೇ ರಂಗವನ್ನು ಬಯಸುತ್ತದೆ. ಆದರೆ ದೇಶದ ಗಡಿಗಳ ಬಗ್ಗೆ ಅದಕ್ಕೆ ಚಿಂತೆ ಇಲ್ಲ (ಕಾಂಗ್ರೆಸ್ ಸಿರ್ಫ ಅಪನಿ ಸರಕಾರ ಬನಾನೇ ಕೇಲಿಯೇ ತೀಸರಾ ಮೋರ್ಚಾ ಯಾ ಚೌತಾ ಮೋರ್ಚಾ ಚಾಹತಿ ಹೈ. ಪರ ವಾಸ್ತವಿಕ ಮೋರ್ಚಾ(ಗಡಿ) ಕಿ ಉಸಕೋ ಪರವಾ ನಹೀಂ) ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಗುಡುಗಿದ್ದಾರೆ .
ಹರಿಯಾಣದಲ್ಲಿ ಜನಹಿತ ಕಾಂಗ್ರೆಸ್ ಜತೆ ಬಿಜೆಪಿಯ ಮೈತ್ರಿ ಬದಲಾಗಿಲ್ಲ ಎಂದ ಅವರು ಕೊನೆಯಲ್ಲಿ ಮುಖ್ಯ ಮಂತ್ರಿ ಬನಾರಸಿ ದಾಸ್ ಗುಪ್ತರವರ ಮಗ ಅಜಯ್ ಗುಪ್ತಾರವರನ್ನು ಪಕ್ಷಕ್ಕೆ ಸ್ವಾಗತಿಸಿದರು.


ಇದರಲ್ಲಿ ಇನ್ನಷ್ಟು ಓದಿ :