Widgets Magazine

ಕೆಲ ಕಾಂಗ್ರೆಸ್ ಸಂಸದರು ಜಯಗಳಿಸಲು ಆರೆಸ್ಸೆಸ್ ಬೆಂಬಲ ಪಡೆದಿದ್ದಾರೆ: ಬಿಜೆಪಿ

PTI

2009 ರ ಚುನಾವಣೆಯಲ್ಲಿ ಆಯ್ಕೆಯಾಗ ಬಯಸಿ ಕೆಲವು ಕಾಂಗ್ರೆಸ್ ಸಂಸದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದರು ಎಂಬುದು ನನಗೆ ತಿಳಿದಿದೆ " ಎಂದು ಚಾರಿ ಹೇಳಿದ್ದಾರೆ.

ನವದೆಹಲಿ| ವೆಬ್‌ದುನಿಯಾ| Last Modified ಗುರುವಾರ, 10 ಏಪ್ರಿಲ್ 2014 (16:34 IST)
ಕೆಲವು ಕಾಂಗ್ರೆಸ್ ಸಂಸದರು 2009 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋರಿದ್ದರು ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶೇಷಾದ್ರಿ ಚಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಚಾರಿಯವರ ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ವಕ್ತಾರ ಸಂಜಯ್ ಝಾ "ಚಾರಿ ಆರೋಪ ನಿರಾಧಾರವಾದದ್ದು. ತಾವು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೆ ಎಂದು ಅವರು ಹೇಳುತ್ತಿದ್ದಾರೆ. ಅವರಿಂದ ಸಹಾಯ ಪಡೆದಿರುವವರು ಯಾರೆಂದು ಹೆಸರಿಸಲಿ" ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಸಂಜಯ್ ಸವಾಲೆಸೆದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :