ಕೇಜ್ರಿವಾಲ್‌ರಿಗಿದೆ ನಕ್ಸಲ್ ನಂಟು: ಹಸನ್ ಕುಸ್ಮಿ

ನವದೆಹಲಿ, ಸೋಮವಾರ, 14 ಏಪ್ರಿಲ್ 2014 (18:33 IST)

ಆಪ್ ನಾಯಕ ಕೇಜ್ರಿವಾಲ್ ಮೇಲೆ ಬರುತ್ತಿರುವ ಆರೋಪಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರದೇ ಪಕ್ಷದವರು ಕೇಜ್ರಿವಾಲ್ ವಿರುದ್ಧ ಒಂದೊದಾಗಿ ಆರೋಪ ಹೊರಿಸುತ್ತಿದ್ದಾರೆ. ಅವರಿಗೆ ನಕ್ಸಲ್‌ರ ಜತೆ ನಂಟಿದೆ ಎಂದು ಹೇಳುವುದರ ಮೂಲಕ ಅವರದೇ ಪಕ್ಷದ ಸದಸ್ಯ ಮೌಲಾನಾ ಹಸನ್ ಕಾಸ್ಮಿ ಹೊಸ ಬಾಂಬ ಸಿಡಿಸಿದ್ದಾರೆ ಎಂದು ವರದಿಯಾಗಿದೆ.

PTI

"ನಾವು ಒಂದು ದಿನ ಅರವಿಂದ್ ಮನೆಯಲ್ಲಿ ಸಭೆ ಸೇರಿದ್ದೆವು. ಆಗ ತಡವಾಗಿ ಸ್ಥಳಕ್ಕೆ ಆಗಮಿಸಿದ ಅವರು ನಾನು ನಕ್ಸಲ್‌ರನ್ನು ಭೇಟಿಯಾಗಿ ಬಂದಿರುವುದಾಗಿ ತಿಳಿಸಿದರು. ಹೀಗೇಕೆ ಎಂದು ನಾನು ಕೇಳಿದಾಗ ಅವರು ನಾನವರ ಸಮಸ್ಯೆಗಳನ್ನು ಕೇಳಲು ಹೋಗಿದ್ದೆ ಎಂದು ಉತ್ತರಿಸಿದರು. ಅವರ ಈ ಅಸಂವಿಧಾನಿಕ ನಡೆ ನನ್ನನ್ನು ಬೆಚ್ಚಿ ಬೀಳಿಸಿತು" ಎಂದವರು ತಿಳಿಸಿದ್ದಾರೆ.

"ಅವರಿವರ ಮೇಲೆ ಆರೋಪ ಹೊರಿಸುವ ಕೇಜ್ರಿವಾಲ್ ಭೂ ಕಬಳಿಕೆ ಹಗರಣದಲ್ಲಿ ತೊಡಗಿರುವ ಪ್ರಶಾಂತ್ ಭೂಷಣರನ್ನು ತಮ್ಮ ಪಕ್ಷದಲ್ಲಿ ಇರಿಸಿಕೊಂಡಿಡ್ಡಾರೆ. ಮಾಧ್ಯಮದವರು ಭೃಷ್ಟರು ಎಂದು ಹೇಳುವ ಅವರು ತಮ್ಮ ಪಕ್ಷದಲ್ಲಿ ಮಾಧ್ಯಮದವರನ್ನು ಸೇರಿಸಿ ಕೊಂಡಿದ್ದಾರೆ. ಭೃಷ್ಟಾಚಾರದ ವಿರುದ್ಧ ಮಾತನಾಡುವ ಆಪ್ ನಾಯಕ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು" ಎಂದು ಕಾಸ್ಮಿ ಸವಾಲು ಹಾಕಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...