ಕೇಜ್ರಿವಾಲ್ ಉದ್ದೇಶ ಚೆನ್ನಾಗಿದೆ, ಆದರವರು ಅವಸರ ಮಾಡುತ್ತಾರೆ: ಶ್ರೀ ಶ್ರೀ ರವಿಶಂಕರ್

ಕೋಲಕಾತಾ, ಬುಧವಾರ, 9 ಏಪ್ರಿಲ್ 2014 (09:23 IST)

PTI
ಅರವಿಂದ್ ಕೇಜ್ರಿವಾಲ್ ಕುರಿತ ತಮ್ಮ ಅಭಿಪ್ರಾಯದಲ್ಲಿ ಅಚಾನಕ್ ಬದಲಾವಣೆ ಮಾಡಿಕೊಂಡಿರುವ ಶ್ರೀ ಶ್ರೀ ರವಿಶಂಕರ್, ಆಪ್ ನಾಯಕರ ಉದ್ದೇಶ ಚೆನ್ನಾಗಿದೆ. ಆದರೆ ಅವರು ಅವಸರ ಮಾಡುತ್ತಾರೆ ಎಂದಿದ್ದಾರೆ ಎಂದು ವರದಿಯಾಗಿದೆ.

"ಕೇಜ್ರಿವಾಲ್ ತುಂಬ ಒಳ್ಳೆಯ ಜನ. ನನಗೆ ಅವರ ಬಗ್ಗೆ ಗೊತ್ತಿದೆ. ಉತ್ತಮ ಉದ್ದೇಶಗಳನ್ನು ಹೊಂದಿದ್ದಾರೆ. ಆದರೆ ಅವರು ಕೆಲಸ ಮಾಡುವಲ್ಲಿ ಅವಸರವನ್ನು ಮಾಡುತ್ತಾರೆ. ಅಲ್ಲದೇ ಆಪ ನಾಯಕರಿಗೆ ಆಡಳಿತದಲ್ಲಿ ಅನುಭವವಿಲ್ಲ" ಎಂದು ಸ್ವಾಮೀಜಿ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ, ಫೆಡರಲ್ ಫ್ರಂಟ್ ಕಲ್ಪನೆಯ ಕುರಿತು ಪ್ರತಿಕ್ರಿಯಿಸಿರುವ ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ನಮ್ಮ ರಾಷ್ಟ್ರಕ್ಕೆ ಸಮ್ಮಿಶ್ರ ಸರ್ಕಾರ ಉತ್ತಮವಲ್ಲ ಎಂದು ಹೇಳಿದ್ದಾರೆ.

"ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ತಮ್ಮೊಳಗೆ ಕಚ್ಚಾಡುವುದರಲ್ಲಿಯೇ ಸಮಯವನ್ನು ವ್ಯರ್ಥ ಮಾಡುತ್ತಾರೆ. ಆದ್ದರಿಂದ ಸೃಜನಶೀಲ ಮತ್ತು ಅಭಿವೃದ್ಧಿ ಕೆಲಸಗಳಿಗೆ ಸಮಯ ಸಾಲುವುದಿಲ್ಲ " ಎಂದು ರವಿಶಂಕರ್ ಗುರುಜೀ ಅಭಿಪ್ರಾಯ ಪಟ್ಟಿದ್ದಾರೆ.

ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ರವಿಶಂಕರ್ "ಕೇಂದ್ರದ ಯಾವುದೇ ಸರಕಾರ ಏನನ್ನಾದರೂ ಮಾಡುವುದರ ಮೊದಲು ಎರಡು ಪಕ್ಷಗಳ ವಿಶ್ವಾಸವನ್ನು ಪಡೆದುಕೊಳ್ಳಬೇಕು" ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :