ಕೇಜ್ರಿವಾಲ್ ಮೋದಿಯನ್ನು 1 ಲಕ್ಷ ಮತಗಳ ಅಂತರದಿಂದ ಸೋಲಿಸಲಿದ್ದಾರೆ: ಆಪ್

ನವದೆಹಲಿ, ಗುರುವಾರ, 20 ಮಾರ್ಚ್ 2014 (18:50 IST)

ವಿಧಾನಸಭಾ ಚುನಾವಣೆಯಲ್ಲಿ ಶೀಲಾ ದಿಕ್ಷೀತ್‌ರನ್ನು ಸೋಲಿಸಿದ ನಂತರ ಆತ್ಮವಿಶ್ವಾಸದಿಂದ ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಲೋಕಸಭಾ ಮಹಾಸಮರದಲ್ಲೂ ತನ್ನ ಯಶೋಗಾಥೆಯನ್ನು ಮುಂದುವರೆಸುವ ನಂಬಿಕೆಯಲ್ಲಿದೆ.

PTI

ನಮ್ಮ ಪಕ್ಷದ ನಾಯಕ ಕೇಜ್ರಿವಾಲ್ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕನಿಷ್ಠ 1 ಲಕ್ಷ ಮತಗಳಿಂದ ಸೋಲಿಸಲಿದ್ದಾರೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವಂತೆ ಅವರು ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಒತ್ತಾಯಿಸಿದ್ದಾರೆ. ದಿಗ್ವಿಜಯ್ ಸಿಂಗ್ ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಬಲವಾದ ಸ್ಪರ್ಧಿ ಅಲ್ಲ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ತಾನು ಮೋದಿ ವಿರುದ್ಧ ಸ್ಪರ್ಧಿಸಲು ತಯಾರಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ ಎಂದು ಬುಧವಾರ ವರದಿಯಾಗಿತ್ತು.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರಿಗೆ ಬೆಂಬಲ ನೀಡುವುದನ್ನು ತಳ್ಳಿಹಾಕಿದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಪದವಿಯ ಅಭ್ಯರ್ಥಿಯ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.

ಕೇಜ್ರಿವಾಲ್ ಈಗಾಗಲೇ ಮೋದಿಯನ್ನು ಸೋಲಿಸಲು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ವಾರಣಾಸಿ ಜನರ ಅಭಿಪ್ರಾಯ ಕೇಳಿ ಅಲ್ಲಿನ ಸ್ಪರ್ಧಿಯನ್ನು ನಿರ್ಧರಿಸುವುದಾಗಿಯೂ ಕೂಡ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...