ಕೈ ಕೊಟ್ಟ ಕಾಂಗ್ರೆಸ್: ಎಚ್.ಟಿ.ಸಾಂಗ್ಲಿಯಾನ ಚಿತ್ತ ಜೆಡಿಎಸ್ನತ್ತ
ಬೆಂಗಳೂರು, ಬುಧವಾರ, 19 ಮಾರ್ಚ್ 2014 (17:59 IST)
ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜನತಾ ದಳ (ಜ್ಯಾತ್ಯಾತೀತ)ಪಕ್ಷವನ್ನು ಸೇರುವ ಸಾಧ್ಯತೆಗಳಿವೆ.ಕರಾವಾರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಅವರು ಪಕ್ಷದ ವಿರುದ್ಧ ಬೇಸರಗೊಂಡು ಜೆಡಿಎಸ್ ಪಕ್ಷವನ್ನು ಸೇರುವ ಚಿಂತನೆಯಲ್ಲಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಬಯಸಿರುವ ಅವರು ಬೆಂಗಳೂರು ಕೇಂದ್ರ ಅಥವಾ ಕಾರವಾರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದರೆ ಮಾತ್ರ ಪಕ್ಷ ಸೇರುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.ಸಾಂಗ್ಲಿಯಾನ ಅವರು ಬೆಂಗಳೂರು ಸೆಂಟ್ರಲ್ ಅಥವಾ ಕಾರವಾರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಘೋಷಣೆಯಾಗಿದ್ದ ಕಾಂಗ್ರೆಸ್ ಪಕ್ಷದ ಪಟ್ಟಿಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ರಿಝ್ವಾನ್ ಅರ್ಶದ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಸಾಂಗ್ಲಿಯಾನ ಅವರಿಗೆ ಮುಂದಿನ ಪಟ್ಟಿಯಲ್ಲಿ ಕಾರವಾರ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಿನ್ನೆ ಘೋಷಣೆಯಾಗಿರುವ ಪಟ್ಟಿಯಲ್ಲಿ ಕಾರವಾರ ಕ್ಷೇತ್ರದಿಂದ ಆರ್.ವಿ.ದೇಶಪಾಂಡೆ ಅವರ ಮಗ ಪ್ರಶಾಂತ್ ದೇಶಪಾಂಡೆ ಅವರಿಗೆ ಟಿಕೆಟ್ ನೀಡಲಾಗಿದೆ.ಪಕ್ಷದ ನಿರ್ಧಾರದಿಂದ ತೀವ್ರ ಬೇಸರಗೊಂಡಿರುವ ಸಾಂಗ್ಲಿಯಾನ ಅವರು ಇದೀಗ ತಮ್ಮ ಬೆಂಬಲಿಗರ ಸಭೆ ನಡೆಸಿ, ನಂತರ ಜೆಡಿಎಸ್ ಪಕ್ಷಕ್ಕೆ ತೆರಳುವುದೋ ಇಲ್ಲವೋ ಎನ್ನುವ ಬಗ್ಗೆ ತೀರ್ಮಾನಿಸಲಿದ್ದಾರೆ.2008
ರಲ್ಲಿ ಯುಪಿಎ ಪರ ಮತ ಚಲಾಯಿಸಿದ್ದರಿಂದ ಬಿಜೆಪಿಯಿಂದ ಅಮಾನತುಗೊಂಡಿದ್ದ ಸಾಂಗ್ಲಿಯಾನ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ನಂತರ 2009ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ಪಿ.ಸಿ.ಮೋಹನ್ ಅವರ ವಿರುದ್ಧ ಸುಮಾರು 56 ಸಾವಿರ ಮತಗಳ ಭಾರಿ ಅಂತರದಿಂದ ಗೆದ್ದು ಬೀಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :
,
,
,
,
,