ಚುನಾವಣಾ ಮೈದಾನದಲ್ಲಿ ಶ್ರೀದೇವಿಯ ಝಲಕ್ !

ಆಗ್ರಾ , ಬುಧವಾರ, 9 ಏಪ್ರಿಲ್ 2014 (08:39 IST)

ಪ್ರಸಿದ್ಧ ಚಿತ್ರ ನಟಿ ಶ್ರೀದೇವಿ ಆರ್‌ಎಲ್‌ಡಿ ಕಾಂಗ್ರೆಸ್ ಅಭ್ಯರ್ಥಿ, ಅಮರ್ ಸಿಂಗ್‌ರವರ ಪರ ನಿನ್ನೆ ಫತೇಪುರ್ ಸಿಕ್ರಿಯಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಅವರ ಪತಿ, ನಿರ್ಮಾಪಕ ಬೋನಿ ಕಪೂರ್ ಕೂಡ ಅವರ ಜತೆ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಕ್ರಿ ಲೋಕಸಭಾ ಕ್ಷೇತ್ರದಲ್ಲಿ ಅವರು ರೋಡ್ ಶೋ ನಡೆಸಿದರು. ಸುರಸುಂದರಿ ನಟಿಯನ್ನು ಕಣ್ತುಂಬಿಸಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ಹೆಜ್ಜೆ ಹಜ್ಜೆಗೂ ಬೋನಿ ಕಪೂರ್ ಮತ್ತು ಶ್ರೀದೇವಿಯ ಮೇಲೆ ಪುಷ್ಪವೃಷ್ಠಿ ಸುರಿಯುವುದರ ಮೂಲಕ ಜನರು ಅವರನ್ನು ಸ್ವಾಗತಿಸಿದರು.

PTI

ಈ ಸಂದರ್ಭದಲ್ಲಿ, ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೂ ಅನೇಕ ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು.

ಈಟೋರಾದಿಂದ ಪ್ರಾರಂಭವಾದ ಶ್ರೀದೇವಿ ರೋಡ್ ಸೋ ಕಕುವಾ, ತೆಹ್ರಾ, ಸೈಂಯಾ, ರಜುಪುರ, ಶಂಸಾಬಾದ್, ಹರಿದಾಸಿಪುರ, ಫತೇಹಾಬಾದ್, ವಾಜಿದಪುರ್, ನಗಲಾ ದೇವಹಂಸ, ಡೌಕಿಯನ್ನು ದಾಟಿ ಬಮರೌಲಿ ಕಟಾರಾ, ಕಲಾಲ್ ಕೋರಿಯಾದಲ್ಲಿ ಪರಿಸಮಾಪ್ತವಾಯಿತು.ಇದರಲ್ಲಿ ಇನ್ನಷ್ಟು ಓದಿ :