ಚುನಾವಣೆಯ ನಂತರ ನಿತೀಶ್ ಕುಮಾರ್ 'ಭಿಕ್ಷುಕರಾಗುತ್ತಾರೆ' : ಬಿಜೆಪಿ ಲೇವಡಿ

ಪಾಟ್ಣಾ, ಗುರುವಾರ, 10 ಏಪ್ರಿಲ್ 2014 (16:28 IST)

ಬಿಜೆಪಿಯ ಚುನಾವಣಾ ಪ್ರಣಾಳಿಕೆ ಒಳಗೊಂಡಿರುವ ನೀತಿಗಳ ವಿರುದ್ಧ ಮತ್ತು ಪಕ್ಷದ ಪ್ರಧಾನಿಯಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿರುವುದರ ವಿರುದ್ಧ ಕಿರುಚುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರವರ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಸಂಸತ್ ಚುನಾವಣೆಯ ನಂತರ ಬಿಹಾರ್ ರಾಜಕಾರಣದಲ್ಲಿ ನಿತೀಶ್ "ರಾಜಕೀಯ ಭಿಕ್ಷುಕ" ರಾಗುತ್ತಾರೆ ಮತ್ತು ಲಾಲು "ಸಂಪೂರ್ಣ ಶೂನ್ಯತೆ" ಎಡೆ ಜಾರುತ್ತಾರೆ ಎಂದು ಕಿಡಿಕಾರಿದೆ.

PTI

ಬಿಜೆಪಿ ಪ್ರಣಾಳಿಕೆಯನ್ನು "ದಿಕ್ಕುತಪ್ಪಿದ ಬಂಡವಾಳಶಾಹಿವಾದ" ಎಂದು ಜರಿದಿದ್ದ ನಿತೀಶ್ ಹೇಳಿಕೆಗೆ ಪ್ರತಿದಾಳಿ ನಡೆಸಿರುವ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ರವಿಶಂಕರ್ ಪ್ರಸಾದ್ "ಇದು ನರೇಂದ್ರಮೋದಿ ಕೈಯಲ್ಲಿ ಸೋಲುವುದು ಖಚಿತವಾಗಿರುವುದಕ್ಕೆ ಹೆದರಿರುವ ನಿತೀಶ್ ಕುಮಾರ್‌ರವರ ಹತಾಶ ಮಾತು" ಎಂದು ಹೀಗಳೆದಿದ್ದಾರೆ.

"ನಿತೀಶ್ ಕುಮಾರ್ ತಾನು ಎಲ್ಲರಿಗಿಂತ ಬುದ್ಧಿವಂತ 'ರಾಜಕೀಯ ಆಟಗಾರ' ಎಂದು ಅಂದುಕೊಂಡಿದ್ದಾರೆ ಮತ್ತು ರಾಜ್ಯದ ಜನರನ್ನು 'ಪೆದ್ದ' ರೆಂದು ಭಾವಿಸಿದ್ದಾರೆ. ಆದರೆ ಜನರು ಈ ಚುನಾವಣೆಯಲ್ಲಿ ಅವರನ್ನು 'ರಾಜಕೀಯ ಭಿಕ್ಷುಕ' ನನ್ನಾಗಿಸುತ್ತಾರೆ " ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನಂದ ಕಿಶೋರ್ ಯಾದವ್ ಭವಿಷ್ಯ ನುಡಿದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...