ಟಿಕೆಟ್‌ಗಾಗಿ ಲಂಚ: ಇಬ್ಬರು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದ ಕೇಜ್ರಿವಾಲ್

ನವದೆಹಲಿ, ಶುಕ್ರವಾರ, 21 ಮಾರ್ಚ್ 2014 (19:14 IST)

PTI
ಲಂಚವನ್ನು ಪಡೆದು ಟಿಕೆಟ್ ನೀಡುವ ಭರವಸೆ ನೀಡಿದ್ದ ಆಮ್ ಆದ್ಮಿ ಪಕ್ಷದ ಇಬ್ಬರು ಮುಖಂಡರನ್ನು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಉಚ್ಚಾಟಿಸಿದ್ದಾರೆ.

ಪಕ್ಷದ ಮುಖಂಡರಾದ ಅರುಣಾ ಸಿಂಗ್ ಮತ್ತು ಮತ್ತೊಬ್ಬ ನಾಯಕ ಅಭ್ಯರ್ಥಿಯಾಗಬಯಸುವ ಆಕಾಂಕ್ಷಿಗಳಿಗೆ ಲಂಚ ನೀಡಿದಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಅವರು ಲಂಚ ಪಡೆದಿರಲಿಲ್ಲ.ಮಾತುಕತೆಯ ಹಂತದಲ್ಲಿತ್ತು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಉತ್ತರಪ್ರದೇಶದ ಮಿಸ್ರಿಕ್ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ ಎನ್ನುವವರು ಕೇಜ್ರಿವಾಲ್‌ಗೆ ದೂರು ನೀಡಿದ್ದರಿಂದ ಇಬ್ಬರು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಲಂಚ ನೀಡಿದಲ್ಲಿ ಟಿಕೆಟ್ ನೀಡುವುದಾಗಿ ಇಬ್ಬರು ಉಚ್ಚಾಟಿತ ನಾಯಕರು ನೀಡಿದ ಭರವಸೆಯ ಚರ್ಚೆಯನ್ನು ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಿ ಕೇಜ್ರಿವಾಲ್‌ಗೆ ರವಾನಿಸಿದ್ದರು ಎನ್ನಲಾಗಿದೆ.

ಯಾವುದೇ ಅಭ್ಯರ್ಥಿಯ ವಿರುದ್ಧದ ಆರೋಪಗಳನ್ನು ಸೂಕ್ತವಾದ ಸಾಕ್ಷಧಾರಗಳೊಂದಿಗೆ ಬಹಿರಂಗಪಡಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...