ಟೀ ಮಾರಾಟ ಮಾಡುತ್ತಿದ್ದ ಮೋದಿ ದೇಶ ನಡೆಸಬಹುದಾದ್ರೆ ನಾನು ಕೂಡಾ ದೇಶ ನಡೆಸಬಲ್ಲೇ: ರಾಖಿ ಸಾವಂತ್

ಮುಂಬೈ, ಶುಕ್ರವಾರ, 24 ಜನವರಿ 2014 (17:37 IST)

PTI
ಮಾಡುತ್ತಿದ್ದ ಬಿಜೆಪಿ ಪ್ರದಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶ ಮುನ್ನಡೆಸಬಹುದಾದ್ರೆ ಐಟಂ ಗರ್ಲ್ ಆದ ನಾನು ಕೂಡಾ ದೇಶ ಮುನ್ನಡೆಸಲು ಏಕೆ ಸಾಧ್ಯವಿಲ್ಲ ಎಂದು ರಾಖಿ ಸಾವಂತ್ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಕೋಲಾಹಲ ಸೃಷ್ಟಿಸಿದೆ.

ಶಿವಸೇನೆ ಮುಖ್ಯಸ್ಥ ಠಾಕ್ರೆ ಮಾತನಾಡಿ, ಐಟಂ ಗರ್ಲ್ ರಾಖಿ ಸಾವಂತ್ ಕೇಜ್ರಿವಾಲ್‌ಗಿಂತ ಉತ್ತಮ ಅಡಳಿತ ನೀಡಬಲ್ಲಳು ಎಂದು ಹೇಳಿಕೆ ನೀಡಿದ್ದರು.

ಠಾಕ್ರೆ ಹೇಳಿಕೆ ನೀಡಿದ ಮಾರನೇ ದಿನವೇ ಪ್ರಂಶಸೆಯಿದ್ದ ಉಬ್ಬಿದ ರಾಖಿ ಸಾವಂತ್, ಇದೀಗ, ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಯಬಹುದಾದರೆ ಐಟಂ ಗರ್ಲ್ ಆದ ನಾನು ಕೂಡಾ ದೇಶ ನಡೆಸಬಲ್ಲೇ ಎಂದು ನುಲಿದಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಸತ್ತಿನ ಮುಂದೆ ನಡೆಸಿದ ಧರಣಿಯಿಂದ ಪ್ರತಿಯೊಂದು ರಾಜಕೀಯ ಪಕ್ಷವು ತಲೆತಗ್ಗಿಸುವಂತಾಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಆಮ್ ಆದ್ಮಿ ಪಕ್ಷದ ಸಂಸ್ಕ್ರತಿಯಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿ ಟೀಕಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :