ತನ್ನನ್ನು 'ರಾಮ' ನಿಗೆ ಹೋಲಿಸಿಕೊಂಡ ಅರವಿಂದ್ ಕೇಜ್ರಿವಾಲ್, ಬಿಜೆಪಿ ಸೇರುವ ವರದಿಯಲ್ಲಿ ಹುರುಳಿಲ್ಲ

ನವದೆಹಲಿ, ಗುರುವಾರ, 3 ಏಪ್ರಿಲ್ 2014 (18:26 IST)

ಅರವಿಂದ ಕೇಜ್ರಿವಾಲ್ ಬಿಜೆಪಿ ಸೇರುತ್ತಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಬಿಜೆಪಿ ಸೇರುವ ಬಗ್ಗೆ ತಮ್ಮ ನಿಲುವು ಬದಲಾಯಿಸಿದ್ದಾರೆ. ತಮ್ಮನ್ನು ತಪ್ಪಾಗಿ ತಿಳಿಯಲಾಗಿದೆ ಎಂದು ಅವರು ಹೇಳಿದ್ದಾರೆ.

PTI

ಈಸ್ಟ್ ದೆಹಲಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅಭಿಯಾನ ಮಾಡುತ್ತಿದ್ದ ಸಂದರ್ಭದಲ್ಲಿ "ನಾನು ಈ ಪಕ್ಷಗಳಿಗೆ (ಬಿಜೆಪಿ ಅಥವಾ ಕಾಂಗ್ರೆಸ್) ಸೇರಲು ಎಂದಿಗೂ ಬಯಸುವುದಿಲ್ಲ " ಎಂದು ಅವರು ಪ್ರತಿಪಾದಿಸಿದ್ದಾರೆ.

ಒಂದು ವೇಳೆ ತಾನು ಗೆದ್ದರೆ ಅನಿಲ ಬೆಲೆ ಹೆಚ್ಚಿಸುವುದಿಲ್ಲ ಎಂದು ನರೇಂದ್ರ ಮೋದಿ ಭರವಸೆ ನೀಡಿದರೆ ಕೇಜ್ರಿವಾಲ್ ಬಿಜೆಪಿ ಸೇರುತ್ತಾರೆ ಎಂದು ಹಲವಾರು ಮಾಧ್ಯಮಗಳಲ್ಲಿ ವರದಿ ಬಂದ ನಂತರ ದೆಹಲಿಯ ಮಾಜಿ ಮುಖ್ಯಮಂತ್ರಿಯವರಿಂದ ಈ ಹೇಳಿಕೆ ಬಂದಿದೆ.

"ಮೋದಿಯನ್ನು ಸೋಲಿಸಲು ಬಯಸಿ ನಾನು ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಕೇಜ್ರಿವಾಲ್" ಹೇಳಿದರು.

ಆದಾಗ್ಯೂ, ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿ ಜನ ಕೇಂದ್ರಿತ ಆಡಳಿತ ನೀಡುತ್ತೇನೆ ಎನ್ನುವುದರ ಮೂಲಕ ಸಾಮಾನ್ಯರ ಹೃದಯಗಳನ್ನು ಗೆಲ್ಲಲು ಪ್ರಯತ್ನಿಸಿದ ಕೇಜ್ರಿವಾಲ್‌ರ ಬದಲಾಗುತ್ತಿರುವ ನಿಲುವುಗಳು ಅವರು ನಿಜವಾಗಿಯೂ ಜನರು ಎದುರುನೋಡುತ್ತಿರುವ ರಾಜಕೀಯ ಉದ್ಧಾರಕನೇ ಎಂದು ಸಂಶಯವನ್ನು ಹುಟ್ಟು ಹಾಕಿದೆ .

ಕೇಜ್ರಿವಾಲ್ ದೆಹಲಿಯಿಂದ ದೂರ ಓಡಿದರು ಎಂಬ ಭಾರತೀಯ ಜನತಾ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿರುವ ಆಪ್ ನಾಯಕ ಸ್ವತಃ ತಮ್ಮನ್ನು ತಾವು "ರಾಮ" ಮತ್ತು ರಾಜಾ ಹರಿಶ್ಚಂದ್ರನಿಗೆ ಹೋಲಿಸಿಕೊಂಡು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆ ಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

"ಮುಖ್ಯಮಂತ್ರಿ ಕುರ್ಚಿ ಬಿಡಲು ಧೈರ್ಯದ ಅಗತ್ಯವಿದೆ. ನಾನು ಜನರ ಮಧ್ಯದಲ್ಲಿ ಇರುತ್ತೇನೆ ಮತ್ತು ನಿಮಗೆ (ಬಿಜೆಪಿ) ಚಿತ್ರಹಿಂಸೆ ನೀಡುವುದನ್ನು ಮುಂದುವರಿಸುತ್ತೇನೆ,ಜನಪ್ರಿಯ ಬೆಂಬಲದ ಹೊರತಾಗಿಯೂ ತನ್ನ ತಾಯಿಯ ಆದೇಶದ ಮೇರೆಗೆ ವನವಾಸಕ್ಕೆ (ಅರಣ್ಯ) ಹೊರಟ. ಆ ಸಮಯದಲ್ಲಿ ಬಿಜೆಪಿ ಅಸ್ತಿತ್ವದಲ್ಲಿದ್ದರೆ ಅದು ರಾಮನನ್ನು ವಲಸಿಗ ಎಂದು ಕರೆಯುತ್ತಿತ್ತು. ಅಲ್ಲದೆ ರಾಜಾ ಹರಿಶ್ಚಂದ್ರನನ್ನು ಕೂಡ ಅದು ಹಾಗೆ ಕರೆಯುತ್ತಿತ್ತು ಎಂದು ಕ್ರೇಜಿವಾಲ್ ಕಿಡಿಕಾರಿದ್ದಾರೆ ".ಇದರಲ್ಲಿ ಇನ್ನಷ್ಟು ಓದಿ :