Widgets Magazine

ತನ್ನೆಲ್ಲಾ ಘೋಷಣೆಗಳಿಂದ ನರೇಂದ್ರ ಮೋದಿಯ ಹೆಸರನ್ನು ತೆಗೆದ ಬಿಜೆಪಿ

PTI

ಈ ಮೊದಲು 'ಹರ ಹರ ಮೋದಿ' ಘೋಷಣೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದ ಬಿಜೆಪಿ ಈಗ ಇದು 'ಮೋದಿ ಸರಕಾರದ ಸಮಯ' ಎಂಬ ಘೋಷಣೆಯನ್ನು ಸಹ ಹಿಂದಕ್ಕೆ ತೆಗೆದುಕೊಂಡಿದೆ. ಅದನ್ನು ' ಇದು ಬಿಜೆಪಿ ಸರಕಾರದ ಸಮಯ' ಎಂದು ಬದಲಾಯಿಸಲಾಗಿದೆ. ಪಾರ್ಟಿಯ ಅಧ್ಯಕ್ಷರಾದ ರಾಜನಾಥ್ ಸಿಂಗ್ ಪಕ್ಷದ ಕಾರ್ಯಕ್ರಮದಲ್ಲಿ ಬದಲಾಯಿಸಲಾಗಿರುವ ಈ ಘೋಷಣೆಗೆ ಚಾಲನೆ ನೀಡಿದರು.

'ಹರ ಹರ ಮೋದಿ' ಘೋಷಣೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮೋದಿ "ನನ್ನ ಕೆಲವು ಉತ್ಸಾಹಿ ಬೆಂಬಲಿಗರು ಇದರ ಉಪಯೋಗ ಮಾಡುತ್ತಿದ್ದಾರೆ. ನಾನು ಅವರ ಉತ್ಸಾಹಕ್ಕೆ ಆಭಾರಿಯಾಗಿದ್ದೇನೆ.ಆದರೆ ಇದನ್ನು ಮತ್ತೆ ಉಪಯೋಗಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.

ನವದೆಹಲಿ| ರಾಜೇಶ್ ಪಾಟೀಲ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
'ಹರ ಹರ ಮೋದಿ' ಎಂಬ ಘೋಷಣೆ ಸೃಷ್ಟಿಸಿದ ವಿವಾದದಿಂದ ಕಂಗಾಲಾಗಿರುವ ಭಾರತೀಯ ಜನತಾ ಪಕ್ಷ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತನ್ನ ಎಲ್ಲ ಘೋಷವಾಕ್ಯಗಳಲ್ಲೂ ಬದಲಾವಣೆಯನ್ನು ತಂದಿದೆ. ಅಲ್ಲದೇ ಮೋದಿಯ ಹೆಸರಿರುವ ಎಲ್ಲಾ ಘೋಷಣೆಗಳನ್ನು ತೆಗೆದು ಹಾಕಿದೆ.
ವಾರಣಾಸಿಯಲ್ಲಿ 'ಹರ ಹರ ಮೋದಿ' ಎಂಬ ಘೋಷ ವಾಕ್ಯಕ್ಕೆ ಧಾರ್ಮಿಕ, ರಾಜಕೀಯ ಮುಖಂಡರಿಂದ ತೀವೃ ವಿರೋಧ ವ್ಯಕ್ತವಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :