Widgets Magazine

ದೋಷಿ ಸಂಸದರನ್ನು ಮತ್ತು ಶಾಸಕರನ್ನು ಜೈಲಿಗೆ ಕಳುಹಿಸುತ್ತಾರಂತೆ ಮೋದಿ

PTI

"ನಾನು ರಾಜಕಾರಣದ ಅಪರಾಧೀಕರಣದಿಂದ ದುಃಖಿತನಾಗಿದ್ದೇನೆ, ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಜವಾಬ್ದಾರಿಯಾಗಿದೆ. ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಧಾವಂತದಲ್ಲಿ ಅದು ಅಪರಾಧಿಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿತು. ನಂತರ ಆ ಅಪರಾಧಿಗಳು ಪ್ರಬಲರಾಗಿ ರಾಜಕೀಯ ನಾಯಕರಾದರು. ಇಂತಹ ಅಪರಾಧಿಗಳಿಂದ ನಮ್ಮ ವ್ಯವಸ್ಥೆಯನ್ನು ಮುಕ್ತವಾಗಿಸಬೇಕು".

ಅಹಮದಾಬಾದ್ | ವೆಬ್‌ದುನಿಯಾ| Last Modified ಮಂಗಳವಾರ, 15 ಏಪ್ರಿಲ್ 2014 (11:00 IST)
ಕಾಂಗ್ರೆಸ್ ಮೇಲೆ ರಾಜಕೀಯ ಅಪರಾಧದ ಆರೋಪವನ್ನು ಮಾಡುತ್ತ ವಾಗ್ದಾಳಿ ನಡೆಸಿದ ಬಿಜೆಪಿಯ ಪ್ರಧಾನಿ ಪದವಿಯ ಅಭ್ಯರ್ಥಿ ನರೇಂದ್ರ ಮೋದಿ ತಾವು ಅಧಿಕಾರಕ್ಕೆ ಬಂದ ಮೇಲೆ ದೋಷಿ ಸಂಸದರ ಮತ್ತು ಶಾಸಕರ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸಿ, ಒಂದು ವರ್ಷದ ಒಳಗೆ ತಪ್ಪಿತಸ್ಥರನ್ನು ಸರಳಿನ ಹಿಂದುಗಡೆ ಕಳುಹಿಸುತ್ತೇವೆ. 5 ವರ್ಷಗಳೊಳಗೆ ವ್ಯವಸ್ಥೆಯನ್ನು ಅಪರಾಧಿಗಳಿಂದ ಮುಕ್ತರನ್ನಾಗಿ ಮಾಡುತ್ತೇವೆ ಎಂದು ಗುಡುಗಿದ್ದಾರೆ.
"ವ್ಯವಸ್ಥೆಯನ್ನು ಶುದ್ಧಗೊಳಿಸಲು ನನಗೆ ಒಂದು ಅವಕಾಶ ಕೊಡಿ. ಅಪರಾಧಿ ಸಂಸದರ ಮತ್ತು ಶಾಸಕರ ವಿಚಾರಣೆ ನಡೆಸಲು ಅನುಕೂಲವಾಗುವಂತೆ ನಾನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ನಿರ್ಮಿಸುತ್ತೇನೆ ಮತ್ತು ಕೇವಲ ಒಂದು ವರ್ಷದೊಳಗೆ ಕೇಸ್‌ನ್ನು ಮುಗಿಸಿ, ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು" ಎಂದು ಮೋದಿ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :