ದೇಶಕ್ಕೆ ನರೇಂದ್ರ ಮೋದಿಯ ನಾಯಕತ್ವ ಅಗತ್ಯವಾಗಿದೆ: ಕಾಂಗ್ರೆಸ್ ಶಾಸಕ

ಅಹ್ಮದಾಬಾದ್, ಬುಧವಾರ, 29 ಜನವರಿ 2014 (13:27 IST)

PTI
ಭಾರತ ದೇಶಕ್ಕೆ ನರೇಂದ್ರ ಮೋದಿಯಂತಹ ಅಗತ್ಯವಾಗಿದೆ ಎಂದು ಅಮ್ರೇಲಿ ಜಿಲ್ಲೆಯ ಲಾಠಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾವುಕು ಉಂದಾಡ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಕಳೆದ 2007 ಮತ್ತು 2012 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿದ್ದ ಉದಾಂಡ್, ಇದೀಗ ಬಿಜೆಪಿ ಪ್ರದಾನಿ ಅಭ್ಯರ್ಥಿಯನ್ನು ಹೊಗಳಿ ಕಾಂಗ್ರೆಸ್ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಕಳೆದ 2007 ವರ್ಷದ ಹಿಂದೆ ಬಿಜೆಪಿಯಲ್ಲಿದ್ದ ಶಾಸಕ ಉಂಧಾಡ್, ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಮಾಡಿದ್ದರು. ಇದೀಗ ಮತ್ತೆ ಬಿಜೆಪಿಯತ್ತ ವಾಲುವ ಸೂಚನೆ ತೋರುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :