ದೇಶದಲ್ಲಿ ಪರಿವರ್ತನೆಯ ಅಲೆಯಿದೆ : ರಾಜನಾಥ್ ಸಿಂಗ್

ನವದೆಹಲಿ, ಮಂಗಳವಾರ, 15 ಏಪ್ರಿಲ್ 2014 (09:26 IST)

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಲಖನೌ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುತ್ತಿರುವ ರಾಜನಾಥ್ ಸಿಂಗ್ ದೇಶದಲ್ಲಿ ಮೋದಿ ಅಲೆ ಇದೆ ಎಂಬುದರ ಬಗ್ಗೆ ಸಹಮತರಿಲ್ಲ ಎಂದೆನಿಸುತ್ತದೆ. ದೇಶದಲ್ಲಿ ಪರಿವರ್ತನೆಯ ಅಲೆ ಇದೆ ಎಂದು ಅವರು ಹೇಳಿದ್ದಾರೆ.

PTI

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಮೋದಿಯ ಹೆಸರನ್ನು ಒಮ್ಮೆಯೂ ಬಳಸಲಿಲ್ಲ ಮತ್ತು ಮೋದಿ ಅಲೆಯ ಬಗ್ಗೆ ಉಲ್ಲೇಖಿಸಲಿಲ್ಲ. ದೇಶದಲ್ಲಿ ಪರಿವರ್ತನೆಯ ಅಲೆಯಿದೆ. ಎನ್‌ಡಿಎಯ ಅಲೆಯಿದೆ. ದೇಶದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದರು.

ಮೋದಿ ಅಲೆ ಮತ್ತು ಗುಜರಾತ್ ವಿಕಾಶದ ಮಾದರಿಯನ್ನು ಅಲ್ಲಗಳೆದಿದ್ದ ಮುರಳಿ ಮನೋಹರ ಜೋಶಿ ಮಾತಿಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಅದಕ್ಕೆ ನೇರ ಉತ್ತರ ನೀಡದೆ, ಬಿಜೆಪಿ ಮತ್ತು ಮೋದಿ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ದೇವಕಾಂತ್ ಬರುವಾ ಅವರ ಇಂದಿರಾ 'ಈಸ ಇಂಡಿಯಾ, ಇಂಡಿಯಾ ಈಸ ಇಂದಿರಾ' ಎಂಬ ಘೋಷವನ್ನು ನೆನಪಿಸಿದಾಗ ನಾವು 'ಮೋದಿ ಈಸ ಇಂಡಿಯಾ, ಇಂಡಿಯಾ ಈಸ ಮೋದಿ' ಎಂದು ಎಂದಿಗೂ ಹೇಳಿಲ್ಲ ಎಂದು ಹೇಳಿದರು.

ಉಲ್ಲೇಖನೀಯವಾದ ವಿಷಯವೇನೆಂದರೆ ರಾಜನಾಥ ಸಿಂಗ್‌ರವರ ಕಣ್ಣು ಕೂಡ ಪ್ರಧಾನಿ ಸ್ಥಾನದ ಮೇಲೆ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅಂತ ಅವಕಾಶ ಸಿಕ್ಕಿದರೆ ಅವರದನ್ನು ತಪ್ಪಿಸಿಕೊಳ್ಳಲಾರರು. ಅಲ್ಲದೇ ಅವರ ಕೆಲವು ನಿರ್ಣಯಗಳ ಬಗ್ಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಿರಿಯ ನಾಯಕ ಜಸವಂತ್ ಸಿಂಗ್‌ರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಬೇಸರಗೊಂಡಿದ್ದ ಡಾ. ಮುರಳಿ ಮನೋಹರ ಜೋಶಿ, ಇದಕ್ಕೆ ವಸುಂಧರಾ ಜತೆ ರಾಜನಾಥ್ ಕೂಡ ಕಾರಣ ಎಂದು ಆಪಾದಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...