ನಂದನ್ ನಿಲೇಕಣಿ, ಪತ್ನಿ ರೋಹಿಣಿಯ ಒಟ್ಟು ಆಸ್ತಿ ಮೌಲ್ಯ 7,700 ಕೋಟಿ ರೂ.

ಶುಕ್ರವಾರ, 21 ಮಾರ್ಚ್ 2014 (19:14 IST)

PR
PR
ಬೆಂಗಳೂರು: ಬೆಂಗಳೂರು ದಕ್ಷಿಣಕ್ಷೇತ್ರದಲ್ಲಿ ಕಣಕ್ಕಿಳಿಯುವ ಮುಂಚೆ ತಮ್ಮ ಆಸ್ತಿಯನ್ನು ಬಹಿರಂಗಮಾಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ತಮ್ಮ ಮತ್ತು ಪತ್ನಿ ರೋಹಿಣಿ ನಿಲೇಕಣಿ ಅವರ ಒಟ್ಟು ಆಸ್ತಿಮೌಲ್ಯ 7,700 ಕೋಟಿ ರೂ. ಎಂದು ಘೋಷಿಸಿದ್ದಾರೆ.
ನಾನು ಐಐಟಿ ಪದವಿ ಪಡೆದ ಬಳಿಕ ಜೇಬಿನಲ್ಲಿ 200 ರೂ. ಇಟ್ಟುಕೊಂಡು ಕಾರ್ಯಾರಂಭಿಸಿದೆ. ನಾವು 10,000 ರೂ.ನಲ್ಲಿ ಇನ್ಫೋಸಿಸ್ ಸ್ಥಾಪಿಸಿದೆವು ಎಂಬ ಅವರ ಮಾತನ್ನು ಉಲ್ಲೇಖಿಸಿ ನಿಲೇಕಣಿ ಮಾಧ್ಯಮ ತಂಡ ಹೇಳಿದೆ.ಕಂಪನಿಯ ಯಶಸ್ಸಿನಿಂದ ನಂದನ್ ಮತ್ತು ರೋಹಿಣಿ 7,700 ಕೋಟಿ ರೂ. ಆಸ್ತಿಯನ್ನು ಸಂಪಾದಿಸಲು ಸಾಧ್ಯವಾಯಿತು ಎಂದು ಮಾಧ್ಯಮ ತಂಡ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.ನಿಲೇಕಣಿ ಅವರ ಎದುರಾಳಿ ಮತ್ತು ಐದು ಬಾರಿ ಲೋಕಸಭೆ ಸದಸ್ಯ ಅನಂತ ಕುಮಾರ್ ತಮ್ಮ ಪತ್ನಿ ತೇಜಸ್ವಿನಿಗಿಂತ ಕಡಿಮೆ ಆಸ್ತಿಯಿದೆಯೆಂದು ಘೋಷಿಸಿದ್ದಾರೆ.

ನಿನ್ನೆ ಅನಂತಕುಮಾರ್ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಮ್ಮ ಒಟ್ಟು ಆಸ್ತಿಮೌಲ್ಯ 51.12 ಲಕ್ಷ ರೂ. ಎಂದು ಘೋಷಿಸಿದ್ದಾರೆ. ತೇಜಸ್ವಿನಿ 3.86 ಕೋಟಿ ಆಸ್ತಿ ಹೊಂದಿದ್ದಾರೆ. ಕುಟುಂಬದ ಒಟ್ಟು ಆಸ್ತಿ 4.4 ಕೋಟಿ ರೂ. ಎಂದು ಘೋಷಿಸಿದ್ದಾರೆ. ಯುಪಿಎನ ಮಹತ್ವದ ಆಧಾರ್ ಯೋಜನೆಯ ರೂವಾರಿಯಾದ ನಿಲೇಕಣಿ, ಮಾ.9ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ.ನಮ್ಮ ಬಹುತೇಕ ಆಸ್ತಿ ಶೇ.80ರಷ್ಟು ಇನ್ಫೋಸಿಸ್ ಷೇರುಗಳಲ್ಲಿದೆ. ಇನ್ಫೋಸಿಸ್ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದಾಗ ಈ ಆಸ್ತಿ ಸಂಪಾದಿಸಲಾಯಿತು. ಉದ್ಯೋಗಿಗಳ ಸ್ಟಾಕ್ ಮಾಲೀಕತ್ವ ಯೋಜನೆಯಡಿ ಉದ್ಯೋಗಿಗಳಲ್ಲಿ ಕೂಡ ಕಂಪನಿ ಸಂಪತ್ತು ಹಂಚಿಕೆ ಮಾಡಿದೆ.ತಮ್ಮ ಸಂಪತ್ತು ಸಂಪೂರ್ಣವಾಗಿ ಪಾರದರ್ಶಕವೆಂದು ಹೇಳಿದ ಅವರು ತಾವು ಅಕ್ರಮವಾಗಿ ಯಾವುದೇ ಹಣ ಸಂಪಾದಿಸಿಲ್ಲ. ಆದರೆ ದೇಶದ ಹೊರಗೆ ಹೂಡಿಕೆ ಮಾಡುವ ಮೂಲಕ ಬಚ್ಚಿಟ್ಟಿಲ್ಲ ಎಂದು ನಿಲೇಕಣಿ ಹೇಳಿದರು.1999ರಿಂದ, ತಾವು ವಿವಿಧ ಧರ್ಮದತ್ತಿಗಳಿಗೆ 400 ಕೋಟಿ ರೂ.ಆಸ್ತಿಯನ್ನು ದಾನ ಮಾಡಿದ್ದೇವೆ ಎಂದು ನುಡಿದರು.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...