ನಮೋ ಸ್ತುತಿಯನ್ನು ಮನುಷ್ಯರಿಗೆ ಬಳಸುವುದು ದೇವರನ್ನು ಅಪಮಾನಿಸಿದಂತೆ: ಜಸ್ವಂತ್ ಸಿಂಗ್

ಬರ್ಮಾರ್, ಮಂಗಳವಾರ, 25 ಮಾರ್ಚ್ 2014 (19:44 IST)

ಬರ್ಮಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಬಿಜೆಪಿಯ ಮಾಜಿ ನಾಯಕ ಜಸ್ವಂತ್ ಸಿಂಗ್ ಇಂದು ನಾಮಪತ್ರ ಸಲ್ಲಿಸಿದರು.

PTI
ಆ ಸಂದರ್ಭದಲ್ಲಿ ಮಾತನಾಡಿದ 76 ವರ್ಷ ವಯಸ್ಸಿನ ಸಿಂಗ್ "ನಮೋ ದೇವರಿಗಾಗಿ ಹೇಳಲ್ಪಡುವ ಭಜನೆ. ಮನುಷ್ಯರಿಗಾಗಿ ಬಳಸುವುದಲ್ಲ. ನಮೋ ಸ್ತುತಿಯನ್ನು ಬಳಸಿ ಮನುಷ್ಯರನ್ನು ದೇವರೆಂದು ಬಿಂಬಿಸುವುದು ದೇವರನ್ನು ಅಪಮಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

"ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಎರಡನೇ ಬಾರಿಗೆ ಫೋನ್ ಮೂಲಕ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆದರೆ ಬಿಜೆಪಿ ಇನ್ನೂ ಅದನ್ನು ದೃಢೀಕರಿಸಿಲ್ಲ".

"ಈ ಹಿಂದೆ ನಾನು ನನ್ನ ಪುಸ್ತಕದಲ್ಲಿ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕಾಗಿ 2009 ರಲ್ಲಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಒತ್ತಾಯದ ಮೇರೆಗೆ 10 ತಿಂಗಳ ನಂತರ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು".

"ಮೊದಲ ಬಾರಿ ಪಕ್ಷದಿಂದ ಹೊರಹಾಕಿದ ನಂತರ ನಾನು ಬಿಜೆಪಿಗೆ ಮರಳ ಬಾರದಿತ್ತು" ಎಂದು ಜಸ್ವಂತ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...