Widgets Magazine

ನರೇಂದ್ರ ಮೋದಿ ಉತ್ತಮ ವಾಗ್ಮಿಯಲ್ಲ: ಉಮಾ ಭಾರತಿ

PTI

ತಾವು ಕಣಕ್ಕಿಳಿಯುತ್ತಿರುವ ಝಾನ್ಸಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ನೀವು ಮೋದಿ ಭಾಷಣಗಳನ್ನು ಕೇಳಿದ್ದೀರಾ? ಅಟಲ್ ಬಿಹಾರಿ ವಾಜಪೇಯಿ ನಮ್ಮ ಪಕ್ಷದ ಸರ್ವೋತ್ತಮ ವಾಗ್ಮಿ . ಭಾರತೀಯ ರಾಜಕೀಯದಲ್ಲಿ ಅವರ ವಾಕ್ಪುಟುತ್ವಕ್ಕೆ ಸಮನಾಗಿರುವವರು ಯಾರೂ ಇಲ್ಲ" ಎಂದು ಹೇಳಿದರು.

ಝಾನ್ಸಿ| ವೆಬ್‌ದುನಿಯಾ|
ಚುನಾವಣೆ ಹತ್ತಿರ ಬರುತ್ತಿದೆ. ಪಕ್ಷಗಳ ನಡುವೆ ಕೆಸೆರೆರೆಚಾಟವೂ ಜೋರಾಗಿಯೇ ಇದೆ. ಅದು ಸಾಮಾನ್ಯವಾದುದು. ಆದರೆ ಬಿಜೆಪಿ ನಾಯಕಿ ಉಮಾ ಭಾರತಿ ತಮ್ಮದೆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಬಗ್ಗೆ ಋಣಾತ್ಮಕ ಮಾತುಗಳನ್ನಾಡಿದ್ದಾರೆ. ಅವರ ಸಭೆಗಳಿಗೆ ಜನರು ಬರುವುದು ತಮ್ಮ ಬೆಂಬಲ ತೋರಿಸಲು, ಅವರ ಮಾತು ಕೇಳಲು ಅಲ್ಲ ಎಂದು ಉಮಾ ಭಾರತಿ ಅಭಿಪ್ರಾಯ ಪಟ್ಟಿದ್ದಾರೆ.
"ನೀವು ಆಳವಾಗಿ ವಿಶ್ಲೇಷಿಸಿ ನೋಡಿದರೆ, ಮೋದಿ ವಾಗ್ಮಿ ಅಲ್ಲ ಎಂಬುದು ತಿಳಿಯುತ್ತದೆ. ಆದರೆ ಅನೇಕ ಜನರು ಅವರ ಭಾಷಣ ಕೇಳಲು ಸೇರುತ್ತಾರೆ. ಅದಕ್ಕೆ ಕಾರಣ ನಿಮಗೆ ಗೊತ್ತೆ? ಪ್ರೇಕ್ಷಕರ ಬರುವುದು ತಮ್ಮ ಬೆಂಬಲ ತೋರಿಸಲು ಅವರ ಭಾಷಣ ಕೇಳಲು ಅಲ್ಲ" ಎಂದು ಉಮಾ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :