ನರೇಂದ್ರ ಮೋದಿ ಒಬ್ಬ ದೊಡ್ಡ ಸುಳ್ಳುಗಾರ' : ಸೋನಿಯಾ ಗಾಂಧಿ

ರಾಂಚಿ, ಶುಕ್ರವಾರ, 4 ಏಪ್ರಿಲ್ 2014 (17:50 IST)

ಬಿಜೆಪಿ ಸ್ಟಾರ್ ನರೇಂದ್ರ ಮೋದಿ ಮೇಲೆ ಪ್ರಬಲ ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, "ಒಬ್ಬ ದೊಡ್ಡ ಸುಳ್ಳುಗಾರ" ನನ್ನು ದೇಶದ ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡದಿರಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

PTI

ಜಾರ್ಖಂಡ್‌ನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೋನಿಯಾ ಮೋದಿಯ ಹೆಸರನ್ನು ತೆಗೆದುಕೊಳ್ಳದೇ "ವಿರೋಧ ಪಕ್ಷದ ಕೆಲವು ನಾಯಕರು, ಕನಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಂತ್ರಿಕ ದಂಡದ ಮೂಲಕ ಒಂದೇ ದಿನದಲ್ಲಿ ಎಲ್ಲವನ್ನು ತಾವು ಬದಲಾಯಿಸಬಹುದು ಎಂದವರು ತಿಳಿದಿದ್ದಾರೆ" ಎಂದು ಟೀಕಿಸಿದರು.
.
"ಪ್ರಜಾಪ್ರಭುತ್ವದಲ್ಲಿ ಕೇವಲ ಒಬ್ಬರು ಮಾತ್ರ ಅಧಿಕಾರ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಬಾರದು." ಎಂದ ಅವರು ತಮ್ಮ ಭಾಷಣದಲ್ಲಿ ಮೋದಿ ಹೆಸರನ್ನು ಸಂಪರ್ಕಿಸಿ ಬಳಸಲಿಲ್ಲ. ಹಿಂಸೆಯನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾವೋವಾದಿಗಳನ್ನವರು ಒತ್ತಾಯಿಸಿದರು.

ಕಲ್ಲಿದ್ದಲು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತ , ಕಲ್ಲಿದ್ದಲು ಕಾರ್ಮಿಕರ ಸ್ಥಿತಿಯನ್ನುಉತ್ತಮಗೊಳಿಸುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕೃತಗೊಳಿಸಿದ್ದರು ಎಂದು ಅವರು ಹೇಳಿದರು.

ಸೋನಿಯಾ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದರು.ಇದರಲ್ಲಿ ಇನ್ನಷ್ಟು ಓದಿ :