ನರೇಂದ್ರ ಮೋದಿ ಬಿಜೆಪಿಯ ಸ್ವಯಂ ನಾಶ ಮಂತ್ರ: ಕಾಂಗ್ರೆಸ್

ನವದೆಹಲಿ, ಮಂಗಳವಾರ, 25 ಮಾರ್ಚ್ 2014 (13:21 IST)

ಭಾರತೀಯ ಜನತಾ ಪಕ್ಷದ ಪ್ರಧಾನಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಬಿಜೆಪಿಯ ಆತ್ಮ ಹಾನಿ ಎಂದು ಕಾಂಗ್ರೆಸ್ ಟೀಕಿಸಿದೆ.

PTI

ಮೋದಿ ಬಿಜೆಪಿಯ ಮಂತ್ರ ಎನ್ನುವುದಕ್ಕೆ, ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರಿಕ ಕಚ್ಚಾಟ ಮತ್ತು ಭಿನ್ನಾಭಿಪ್ರಾಯಗಳೇ ಸಾಕ್ಷಿಯಾಗಿವೆ. ಇದು ಮೋದಿಯ ವಿನಾಶವನ್ನು ಎತ್ತಿ ತೋರಿಸುತ್ತವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಟ್ವಿಟ್ ಮಾಡಿದ್ದಾರೆ.

ಪಕ್ಷದ ನಾಯಕ ಜಸ್ವಂತ್ ಸಿಂಗ್‌ಗೆ ರಾಜಸ್ಥಾನದ ಬಾರ್ಮರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ತನ್ನ ನಾಮಪತ್ರ ಸಲ್ಲಿಸಿದ ಘಟನೆಯನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ, ಭಾರತೀಯ ಜನತಾ ಪಾರ್ಟಿ ಒಳಗೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಅಸಮ್ಮತಿ ಕುದಿಯುತ್ತಿದೆ ಎಂದು ಸಿಂಗ್ವಿ ಹೇಳಿದ್ದಾರೆ.

"ಎಲ್.ಕೆ.ಆಡ್ವಾಣಿ, ಜಸ್ವಂತ್ ಸಿಂಗ್, ಹರಿಣ್ ಪಾಠಕ್, ರಾಣಾ (ಲಾಲ್ ಮುನಿ) ಚೌಬೇ, ಲಾಲಜೀ ಟಂಡನ್‌ರಂತಹ ಬಿಜೆಪಿ ನಾಯಕರೇ ಮೋದಿಯನ್ನು ನಂಬುತ್ತಿಲ್ಲ. ಮತ್ತೆ ದೇಶ ಹೇಗೆ ನಂಬಲು ಸಾಧ್ಯ? ನಿಮ್ಮವರೇ ನಿಮ್ಮವರಾಗಿಲ್ಲ, ಮತ್ತೆ ದೇಶ ಹೇಗೆ ನಿಮ್ಮದಾಗಲು ಸಾಧ್ಯ" ಎಂದು ಸಿಂಗ್ವಿ ಲೇವಡಿ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...