ನರೇಂದ್ರ ಮೋದಿ ಗುಜರಾತ್‌ನ ರೈತರನ್ನು ನಾಶಗೊಳಿಸಿದ್ದಾರೆ: ರಾಹುಲ್ ಗಾಂಧಿ

ಗಾಂಧಿನಗರ್, ಶನಿವಾರ, 5 ಏಪ್ರಿಲ್ 2014 (15:29 IST)

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ಗುಜರಾತ್ ರಾಜ್ಯದ ರೈತರನ್ನು "ಹಾಳು" ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

PTI

"ಯಾವತ್ಮಲ್‌ನಲ್ಲಿ ವಿಶಾಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಅತ್ಯಧಿಕವಾಗಿ ವರದಿಯಾಗಿರುವುದು ಈ ಜಿಲ್ಲೆಯಲ್ಲಿಯೇ. ನ್ಯಾನೋ ಕಾರು ಯೋಜನೆಗಾಗಿ, ಗುಜರಾತ್ ಸರ್ಕಾರ 3,000 ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು" ಎಂದರು.


ರೈತರೇ ಹೆಚ್ಚಿನ ಸಂಖೆಯಲ್ಲಿ ನೆರೆದಿದ್ದ ವಿಧರ್ಭ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ಭೂಮಿ ಕಳೆದುಕೊಂಡ ರೈತರಲ್ಲಿ 2,000 ಜನರಿಗೆ ಮಾತ್ರ ಉದ್ಯೋಗ ದೊರೆತಿದೆ. ಇದು ಅಭಿವೃದ್ಧಿಯ ಮಾದರಿಯಾಗಲು ಸಾಧ್ಯವಿಲ್ಲ" ಎಂದು ಆರೋಪಿಸಿದರು.

"ಕೃಷಿಕರು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಅವರ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲವಾದರೂ ಕಾಂಗ್ರೆಸ್ ಯಾವಾಗಲೂ ಅವರ ಸಮುದಾಯದವರ ಕುರಿತು ಕೆಲಸ ಮಾಡಿದೆ" ಎಂದರು.

"ಕೃಷಿಭೂಮಿ ಕಡಿಮೆ ಬೆಲೆಯಲ್ಲಿ ಕೈಗಾರಿಕೋದ್ಯಮಿಗಳಿಗೆ ಮಾರಾಟವಾಗುವುದನ್ನು ತಡೆಯಲು ಕಾಂಗ್ರೆಸ್ ಭೂ ಸ್ವಾಧೀನ ಕಾನೂನನ್ನು ಜಾರಿಗೆ ತಂದಿತು. ಅಲ್ಲದೇ 70, 000 ಕೋಟಿ ಕೃಷಿ ಸಾಲದ ವ್ಯವಸ್ಥೆಯನ್ನು ಮಾಡಿದ್ದು ಕಾಂಗ್ರೆಸ್".

"ಆಗ ವಿರೋಧ ಪಕ್ಷದವರು ಸರ್ಕಾರಕ್ಕೆ ವಾಸ್ತವವಾಗಿ ಎಲ್ಲಿಂದ ಹಣ ಬರುತ್ತದೆ ಎಂದು ಕೇಳಿದರು. ರೈತರಿಗೆ ಸಹಾಯ ಮಾಡಲು ಖಜಾನೆಯನ್ನು ತೆರೆದುದರ ಬಗ್ಗೆ ಅವರು ಸಿಟ್ಟಾದರು. ಆದರೆ ಕೈಗಾರಿಕೋದ್ಯಮಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದಾಗ ಚಿಕ್ಕ ಅನುಮಾನವನ್ನು ಅವರು ಪ್ರಕಟಿಸಿಲ್ಲ " ಎಂದು ಗಾಂಧಿ ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :