ನರೇಂದ್ರ ಮೋದಿ ದೇಶ ನಡೆಸಲು ಸಮರ್ಥರಲ್ಲ: ಅಜಿತ ಪವಾರ್

ಮುಂಬೈ, ಸೋಮವಾರ, 24 ಮಾರ್ಚ್ 2014 (18:50 IST)

"ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿ ದೇಶವನ್ನು ನಡೆಸಲು ಸಮರ್ಥರಲ್ಲ" ಎಂದು ಎನ್‌ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಮೋದಿ, ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದರೆ ನಮಗೆ ಮತ್ತು ಬಿಜೆಪಿಗೆ ಪ್ರತಿ ಲೋಕಸಭಾ ಕ್ಷೇತ್ರಗಳು ಮಹತ್ವ ಎನಿಸುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

PTI
ಠಾಣೆ ಮತ್ತು ಕಲ್ಯಾಣದಲ್ಲಿ ಎನ್‌ಸಿಪಿಯ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ ಪವಾರ್, ರಾಹುಲ್ ಗಾಂಧಿಯವರನ್ನು ಪ್ರದಾನಿಯಾಗಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕ್ಷೇತ್ರದ ಗೆಲುವು ಮಹತ್ವದ್ದಾಗಿದೆ ಎಂದರು.

"ಬಿಜೆಪಿ ಧಾರ್ಮಿಕ ಮತ್ತು ಕೋಮು ಭಾವನೆಯ ಆಧಾರದ ಮೇಲೆ ದೇಶವನ್ನು ವಿಭಾಗಿಸಿದೆ ಮತ್ತು ಅವರ ಆಡಳಿತ ಅರಾಜಕತೆಗೆ ಕೊಂಡೊಯ್ಯುವುದಾಗಿದೆ " ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆರೋಪಿಸಿದರು.

"ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಸಮಾಜವಾಹಿನಿಯಿಂದ ವಿಮುಖರಾಗಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು

ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಯ ಕುರಿತು ಸಹ ವಾಗ್ದಾಳಿ ನಡೆಸಿದ ಅವರು, ಉದ್ಧವ್ ಠಾಕ್ರೆ ಅಧಿಕಾರ ವಹಿಸಿಕೊಂಡ ನಂತರ ಹಲವಾರು ನಾಯಕರು ಪಕ್ಷ ಬಿಟ್ಟು ಹೋದರು ಎಂದು ಲೇವಡಿ ಮಾಡಿದರು.

ಮನೋಹರ್ ಜೋಷಿ ಮುಂತಾದ ಹಿರಿಯ ನಾಯಕರಿಗೆ ಶಿವಸೇನೆಯಿಂದ ತೇಜೋವಧೆ ಮಾಡಲಾಯಿತು. ಹಲವಾರು ಶಿವಸೇನಾ ನಾಯಕರು ಪಕ್ಷ ಬಿಡುವ ಮನಸ್ಸು ಮಾಡಿದ್ದಾರೆ ಎಂದು ಎನ್‌ಸಿಪಿ ಹಿರಿಯ ಮುಖಂಡ ಭವಿಷ್ಯ ನುಡಿದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...