ನರೇಂದ್ರ ಮೋದಿ ಪ್ರತಿದಿನ ಮೇಕಪ್‌ಗಾಗಿ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ?

ಪಾಟ್ನಾ, ಶುಕ್ರವಾರ, 24 ಜನವರಿ 2014 (14:06 IST)

PR
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವೃತ್ತಿಪರತೆಯ ಬ್ಯೂಟಿಶಿಯನ್‌ ಅವರನ್ನು ನೇಮಕ ಮಾಡಿಕೊಂಡಿದ್ದು, ಪ್ರತಿದಿನ 1 ಲಕ್ಷ ರೂಪಾಯಿ ಪಾವತಿಸುತ್ತಿದ್ದಾರೆ ಎಂದು ಬಿಹಾರ್‌ನ ಪಂಚಾಯತ್ ರಾಜ್ ಖಾತೆ ಸಚಿವ ಭೀಮ್ ಸಿಂಗ್ ಆರೋಪಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗುವ ಮುನ್ನ ನರೇಂದ್ರ ಮೋದಿ ಬ್ಯೂಟಿಷಿಯನ್ ನೇಮಕ ಮಾಡಿಕೊಂಡಿರಲಿಲ್ಲ. ಇದೀಗ ಪ್ರಧಾನಿ ಅಭ್ಯರ್ಥಿಯಾದ ಕೂಡಲೇ ಬ್ಯೂಟಿಶಿಯನ್ ನೇಮಕ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಚಿತ್ರಾಂಗದ ಸಿಂಗ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಮೋದಿ ಶೇವ್ ಮಾಡಿಕೊಂಡಲ್ಲಿ ಸುಂದರವಾಗಿ ಕಾಣುತ್ತಾರೆ ಎಂದು ನುಲಿದಿರುವುದನ್ನು ಪ್ರಸ್ತಾಪಿಸಿದರು.

ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಭಾರತದ ಗಡಿ ನಿಯಂತ್ರಣ ರೇಖೆ ಬಳಿ ಪೊಲೀಸರು ಮತ್ತು ಸೈನಿಕರು ಹತ್ಯೆಯಾದಾಗ ದೇಶಕ್ಕಾಗಿ ಅವರ ಜೀವನವನ್ನು ತ್ಯಾಗ ಮಾಡಲಿ ಎನ್ನುವ ಉದ್ದೇಶದಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಭೀಮ್ ಸಿಂಗ್ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು.ಇದರಲ್ಲಿ ಇನ್ನಷ್ಟು ಓದಿ :