ನರೇಂದ್ರ ಮೋದಿ ಪ್ರಧಾನಿಯಾದ್ರೆ ಮುಸ್ಲಿಮರ ಏಳಿಗೆ: ಬಾಬಾ ರಾಮದೇವ್

ನವದೆಹಲಿ, ಸೋಮವಾರ, 27 ಜನವರಿ 2014 (16:55 IST)

PR
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಮುಸ್ಲಿಂ ಸಮುದಾಯದ ಶತ್ರುವಂತೆ ರಾಜಕೀಯ ಪಕ್ಷಗಳು ಬಿಂಬಿಸುತ್ತಿವೆ. ಆದರೆ, ಮೋದಿ ನಾಯಕತ್ವದಲ್ಲಿಯೇ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಏಳಿಗೆ ಕಾಣುತ್ತಾರೆ ಎಂದು ಯೋಗಾ ಗುರು ಬಾಬಾ ರಾಮದೇವ್ ವಾಗ್ದಾಳಿ ನಡೆಸಿದ್ದಾರೆ.

ಕೆಲ ರಾಜಕೀಯ ಪಕ್ಷಗಳು ಮುಸ್ಲಿಂ ಮತದಾರರನ್ನು ತಮ್ಮ ವೋಟ್‌‍ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿವೆ. ಆದ್ದರಿಂದ, ಮೋದಿಯವರನ್ನು ಮುಸ್ಲಿಂ ಸಮುದಾಯವನ್ನು ಶತ್ರುವಂತೆ ತೋರಿಸಲಾಗುತ್ತಿದೆ. ಮೋದಿ ಪ್ರಧಾನಿಯಾದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಲಿದೆ ಎಂದು ರಾಜಕೀಯ ಪಕ್ಷಗಳು ಉಹಾಪೋಹಗಳು ಹರಡಿಸುತ್ತಿವೆ ಎಂದು ರಾಮದೇವ್ ಆರೋಪಿಸಿದ್ದಾರೆ.

ನರೇಂದ್ರ ಮೋದಿಯವರ ನಾಯಕತ್ವದ ಗುಣಗಳು ಮತ್ತು ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ದೇಶದ ಮುಸ್ಲಿಮರಿಗೆ ಉದ್ಯೋಗ, ಬದುಕುವ ಹಕ್ಕು ಮತ್ತು ಗೌರವ, ಪ್ರತಿಷ್ಠೆ ಹಾಗೂ ಉತ್ತಮ ಶಿಕ್ಷಣ ಅಗತ್ಯವಿದೆ. ಯುರೋಪ್ ಮತ್ತು ಅಮೆರಿಕೆಗಿಂತ ಉತ್ತಮ ವಿಶ್ವವಿದ್ಯಾಲಯಗಳು ಭಾರತದಲ್ಲಿದ್ದಾಗ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಅದ್ದರಿಂದ ಮೋದಿಯವರ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ 20 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಅವಕಾಶಗಳಿವೆ. ಆದರೆ, ಅದಕ್ಕೆ ಉತ್ತಮ ಅಡಳಿತ ಹಾಗೂ ಬಲಿಷ್ಛ ನಾಯಕತ್ವದ ಅಗತ್ಯವಿದೆ ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :