ನರೇಂದ್ರ ಮೋದಿ ಬಿಜೆಪಿಗಿಂತ ಹೆಚ್ಚು ಜನಪ್ರಿಯ: ಅರುಣ್ ಜೇಟ್ಲಿ

ನವದೆಹಲಿ, ಶನಿವಾರ, 25 ಜನವರಿ 2014 (13:52 IST)

PTI
ಇತ್ತೀಚೆಗೆ ನಡೆದ ಚುನಾವಣೆ ಸಮೀಕ್ಷೆಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಕ್ಷಕ್ಕಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ.

ಮುಂಬರುವ 2014ರ ಲೋಕಸಭೆ ಚುನಾವಣೆಯ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯವರ ಜನಪ್ರಿಯತೆ ಮತ್ತು ಪ್ರಧಾನಿಯಾಗಿ ಸ್ವೀಕರಿಸುವ ಬಗ್ಗೆ ಜನತೆ ಹೆಚ್ಚಿನ ಒಲವು ತೋರಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷ ಪ್ರತಿಯೊಂದು ರಾಜ್ಯದಲ್ಲಿ ಪಡೆದ ಮತಗಳಿಗಿಂತ ಮೋದಿಯವರ ಜನಪ್ರಿಯತೆಯಲ್ಲಿ ಶೇ.15 ರಿಂದ ಶೇ.20 ರಷ್ಟು ಹೆಚ್ಚಳವಾಗಿದೆ. ತಮಿಳುನಾಡಿನಲ್ಲಿ ಶೇ. 17 ರಷ್ಟು ಮತ್ತು ಒರಿಸ್ಸಾದಲ್ಲಿ ಶೇ.25 ರಷ್ಟು ಕೂಡಾ ಮೋದಿ ಜನಪ್ರಿಯತೆಯಲ್ಲಿ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ತೃತಿಯ ರಂಗ ಅಧಿಕಾರಕ್ಕೆ ಬರಲಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಅವರು, ಚಿಕ್ಕ ಪುಟ್ಟ ಪಕ್ಷಗಳು ರಾಜಕೀಯ ಸ್ಥಿರತೆಯನ್ನು ಬಯಸುವುದರಿಂದ ಎನ್‌ಡೆಎ ತೆಕ್ಕೆಗೆ ಬರಲಿವೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :