ನಾನು ಯಾರ ಮಗಳೊಂದಿಗೆ ಓಡಿಹೋಗಲಿಲ್ಲ: ಅರವಿಂದ್ ಕೇಜ್ರಿವಾಲ್

ನವದೆಹಲಿ, ಸೋಮವಾರ, 7 ಏಪ್ರಿಲ್ 2014 (14:44 IST)

PTI
ಲೋಕಸಭೆಯ ಚುನಾವಣೆಯತ್ತ ಗಮನಹರಿಸಲು ದೆಹಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವಂತಹ ಅವಕಾಶವಾದಿ ರಾಜಕಾರಣಿ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಅರವಿಂದ್ ಕೇಜ್ರಿವಾಲ್, ನಾನು ಯಾರ ಮಗಳೊಂದಿಗೆ ಓಡಿಹೋಗಲಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸಮರ್ಥಿಸಿದ ಕೇಜ್ರಿವಾಲ್, ಕೊನೆಯ ಉಸಿರಿರುವವರೆಗೆ ಇಲ್ಲಿಯೇ ಹೋರಾಟ ನಡೆಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿಯಾಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬಹುದಿತ್ತಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕಿಡಿಕಿಡಿಯಾದ ಅವರು ನಾನು ಯಾರ ಮಗಳೊಂದಿಗೆ ಓಡಿಹೋಗಲಿಲ್ಲ ಎಂದುತ್ತರಿಸಿದ್ದಾರೆ.

ಚಾಂದಿನಿಚೌಕ್‌ ಲೋಕಸಭೆ ಕ್ಷೇತ್ರದ ಆಪ್ ಅಭ್ಯರ್ಥಿ ಅಶುತೋಶ್ ಪರ ಚುನಾವಣೆ ಪ್ರಚಾರದಲ್ಲಿ ಕೇಜ್ರಿವಾಲ್ ಪಾಲ್ಗೊಂಡಿದ್ದರು.

ದೆಹಲಿ ಮುಖ್ಯಮಂತ್ರಿಯಾಗಿ 49 ದಿನಗಳ ಕಾಲ ನಡೆಸಿದ ಅಡಳಿತವನ್ನು ಪ್ರಂಶಸಿದ ಅವರು, ಸ್ವಾತಂತ್ರ್ಯಾನಂತರ ಇಲ್ಲಿಯವರೆಗೆ ಯಾವುದೇ ಪಕ್ಷ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :