ನಾನು ಸೇವಕನಾಗಿ ಸೇವೆ ಸಲ್ಲಿಸುತ್ತೇನೆ, ಆಡಳಿತಗಾರನಾಗಿ ಅಲ್ಲ: ಮೋದಿ

ಕೊಡರ್ಮಾ, ಬುಧವಾರ, 2 ಏಪ್ರಿಲ್ 2014 (17:47 IST)

ಭಾರತಕ್ಕೆ ಮತ್ತೆ ಆಡಳಿತಗಾರರ ಅಗತ್ಯವಿಲ್ಲ. ದೇಶಕ್ಕಾಗಿ ದುಡಿಯುವವರ ಅಗತ್ಯವಿದೆ ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

PTI

ಜಾರ್ಖಂಡ್‍ನ ಕೊಡರ್ಮಾದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ತನ್ನ ಭರವಸೆಗಳನ್ನು ಸಮರ್ಥವಾಗಿ ಈಡೇರಿಸಲು ಮತ್ತು ಇತರ ದೇಶಗಳು ಭಾರತವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಲು ಎನ್‌ಡಿಎಗೆ 300 ಸ್ಥಾನಗಳ ಅಗತ್ಯವಿದೆ ಎಂದರು.

"ಕಳೆದ 60 ವರ್ಷಗಳಲ್ಲಿ ಆಡಳಿತ ನಡೆಸಿದವರು ರಾಷ್ಟ್ರವನ್ನು ಯಾವ ರೀತಿಯಲ್ಲಿ ಹಾಳು ಮಾಡಿದರು ಎಂದು ನಾವೆಲ್ಲ ನೋಡಿದ್ದೇವೆ. ಇದು ದೇಶವನ್ನು ಆಡಳಿತಗಾರರಿಂದ ಮುಕ್ತಗೊಳಿಸ ಬೇಕಾದ ಸಮಯ. ಪ್ರಜಾಪ್ರಭುತ್ವದಲ್ಲಿ ನಮಗೆ ಆಳ್ವಿಕೆ ನಡೆಸುವವರ ಅಗತ್ಯವಿಲ್ಲ. ನಮಗೆ ಸೇವಕರ ಅಗತ್ಯವಿದೆ" ಎಂದು ಅವರು ಹೇಳಿದರು.

"ನಾನು ನಿಮ್ಮ ಸೇವಕನಾಗಿ ಬರುತ್ತೇನೆ. ಆಡಳಿತಗಾರನಾಗಿ ಅಲ್ಲ. ನಾನು ಬಡವರ ಮಾತನ್ನು ಆಲಿಸಲು ಬಯಸುತ್ತೇನೆ".

"ಮೋದಿ ಪ್ರಧಾನಿಯಾಗುತ್ತಾರೆ ಅಥವಾ ಆಗುವುದಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಥವಾ ಇಲ್ಲ ಎನ್ನುವುದು ನಮಗೆ ಪ್ರಮುಖವಾದುದಲ್ಲ. ಆದರೆ ನಾವು ಬಡವರ, ಬುಡಕಟ್ಟಿನವರ, ತುಳಿತಕ್ಕೊಳಗಾದವರ ಮಾತನ್ನು ಆಲಿಸಲು ಬಯಸುತ್ತೇವೆ " ಎಂದು ಅವರು ಹೇಳಿದರು.

"ನೀವು ನಿಮ್ಮ ಅಜ್ಜಿ ಮತ್ತು ಪೋಷಕರು ಬಾಳಿದ ಕಠಿಣ ಜೀವನವನ್ನೇ ಬಯಸುವಿರಾ? ನೀವು ನಿಮ್ಮ ಜೀವನದಲ್ಲಿ ಸುಧಾರಣೆಯನ್ನು ಬಯಸುತ್ತೀರಾ? ದೆಹಲಿಯಲ್ಲಿ ಕುಳಿತಿರುವವರು ನಿಮ್ಮ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರಾ? ಮತ್ತೆ ಯಾಕೆ ನೀವು ಅವರನ್ನು ನಂಬುತ್ತಿದ್ದಿರಾ?" ಎಂದು ಅವರು ಪ್ರಶ್ನಿಸಿದರು.ಇದರಲ್ಲಿ ಇನ್ನಷ್ಟು ಓದಿ :