ಪತಿ ಮೋದಿ ಪ್ರಧಾನಿಯಾಗುವವರೆಗೆ ಅನ್ನ, ಚಹಾ ಮತ್ತು ಚಪ್ಪಲಿ ಧರಿಸುವುದಿಲ್ಲ: ಜಶೋದಾ ಬೆನ್

ವಡೋದರಾ, ಶುಕ್ರವಾರ, 11 ಏಪ್ರಿಲ್ 2014 (16:54 IST)

PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುವವರೆಗೆ ಅನ್ನ, ಚಹಾ ಮತ್ತು ಚಪ್ಪಲಿ ಧರಿಸುವುದಿಲ್ಲ ಎಂದು ಮೋದಿ ಪತ್ನಿ ಜಶೋದಾ ಬೆನ್ ಪ್ರತಿಜ್ಞೆಗೈದಿದ್ದಾರೆ.

ಒಂದ್ದಲ್ಲಾ ಒಂದು ದಿನ ನನ್ನನ್ನು ಕ್ಷಮಿಸಿ ತಮ್ಮ ಜೊತೆ ಮನೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ 61 ವರ್ಷ ವಯಸ್ಸಿನ ಜಶೋದಾ ಬೆನ್ ಹೇಳಿದ್ದಾರೆ.

19968ರ ಏಪ್ರಿಲ್ 10 ರಂದು ಜಶೋದಾ ಬೆನ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ವಿವಾಹವಾಗಿದ್ದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೊನೆಗೂ ತನ್ನನ್ನು ಪತ್ನಿ ಎಂದು ನಾಮಪತ್ರದಲ್ಲಿ ನಮೂದಿಸಿರುವುದಕ್ಕೆ ಆಕೆಗೆ ತುಂಬಾ ಸಂತೋಷವಾಗಿದೆ ಎಂದು ಜಶೋದಾ ಬೆನ್ ಸಹೋದರ ಹೇಳಿದ್ದಾರೆ.

ನಾಲ್ಕುವರೆ ವರ್ಷಗಳ ಹಿಂದೆ ಜಶೋದಾ ಬೆನ್ ಶಿಕ್ಷಕಿ ವೃತ್ತಿಯಿಂದ ನಿವೃತ್ತಳಾದ ನಂತರ ಮೆಹಸಾನಾ ತಾಲೂಕಿನಲ್ಲಿರುವ ಬ್ರಹ್ಮನ್‌ವಾಡಾ ಗ್ರಾಮದಲ್ಲಿ ತನ್ನ ಸಹೋದರ ನಡೆಸುತ್ತಿರುವ ತರಕಾರಿ ಅಂಗಡಿಯಲ್ಲಿ ವಹಿವಾಟಿಗೆ ನೆರವಾಗುತ್ತಿದ್ದಾರೆ.

ಪತಿ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಅಥವಾ ಚಹಾ ಸೇರಿದಂತೆ ಚಪ್ಪಲಿ ಕೂಡಾ ಧರಿಸುವುದಿಲ್ಲ ಎಂದು ಜಶೋದಾ ಬೆನ್ ಪ್ರಮಾಣ ಮಾಡಿದ್ದಾರೆ ಎಂದು ಬೆನ್ ಅವರ ಮತ್ತೊಬ್ಬ ಸಹೋದರ ಅಶೋಕ್ ಮೋದಿ ತಿಳಿಸಿದ್ದಾರೆ.

ಮೇ 16 ರಂದು ನರೇಂದ್ರ ಮೋದಿ ಪ್ರಧಾನಿಯಾಗಲಿರುವುದರಿಂದ ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಅಂದು ಎಲ್ಲಾ ಮಾಧ್ಯಮದವರು ಬನ್ನಿ ಎಂದು ಜಶೋದಾ ಬೆನ್ ಸಹೋದರ ಕಮ್ಲೇಶ್ ಭಾಯಿಯವರ ಪತ್ನಿ ಸೀತಾಬೆನ್ ಸುದ್ದಿಗಾರರಿಗೆ ಆಹ್ವಾನ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ...

ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ...

ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ...

ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ...