Widgets Magazine

ಪ್ರಚಾರ ಸಭೆಯಲ್ಲಿ ಜಯಲಲಿತಾ ಮೇಲೆ ಬಾಂಬ್ ಎಸೆಯುವ ಬೆದರಿಕೆ

PTI

ಮೂಲಗಳ ಪ್ರಕಾರ ಪೊಲೀಸ್ ಉಪ ವರಿಷ್ಠಾಧಿಕಾರಿ ಎ ಕನಾಪ್ಪನ್‌ರವರಿಗೆ ಒಂದು ಪತ್ರ ದೊರೆತಿದ್ದು, ಅದರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಅರಕ್ಕೋನಮ್‌ನಲ್ಲಿ ನಡೆಸಲಿರುವ ಸಭೆಯಲ್ಲಿ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಲಾಗಿದೆ. ಪೋಲಿಸರು ಈ ಅನಾಮಧೇಯ ಪತ್ರಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡಿದ್ದಾರೆ.

ಚೆನ್ನೈ| ವೆಬ್‌ದುನಿಯಾ| Last Modified ಬುಧವಾರ, 2 ಏಪ್ರಿಲ್ 2014 (12:34 IST)
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಅರಕ್ಕೋನಮ್ ಪ್ರದೇಶದಲ್ಲಿ ನಡೆಸಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಬಾಂಬ್ ಎಸೆಯುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
29 ಮಾರ್ಚ್ ದಿನ ಈ ಪತ್ರವನ್ನು ಅರಕ್ಕೋನಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಯಲಲಿತಾರವರ ಸಭೆಯಲ್ಲಿ ಅವರ ಮೇಲೆ 4 ಜನ ಸೇರಿ ಬಾಂಬ್ ಹಾಕುವ ಯೋಜನೆ ನಡೆಯುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :